ಬಾಗಲಕೋಟೆ: ಲೋಕಸಭೆ ಕಲಾಪದ ವೇಳೆ ಪ್ರೇಕ್ಷಕರ ಗ್ಯಾಲರಿಯಿಂದ ಜಿಗಿದಿದ್ದ ಆರೋಪಿ ಡಿ. ಮನೋರಂಜನ್ ಸಹಪಾಠಿ ಸಾಯಿಕೃಷ್ಣ ಜಗಲಿ ಅವರನ್ನು ವಶಕ್ಕೆ ಪಡೆದ ದೆಹಲಿ ಪೊಲೀಸರು, ಹೈದರಾಬಾದ್ ಮೂಲಕ ದೆಹಲಿಗೆ ಕರೆದೊಯ್ದಿದ್ದಾರೆ.
‘ಬೆಂಗಳೂರಿನ ಬಿಐಟಿ ಕಾಲೇಜಿನಲ್ಲಿ ಇಬ್ಬರೂ ಸಹಪಾಠಿಗಳಾಗಿದ್ದರು. ಇಬ್ಬರೂ ಸಂಪರ್ಕದಲ್ಲಿರುವುದು ಮನೋರಂಜನ್ ಕರೆಗಳ ವಿವರದಿಂದ ಗೊತ್ತಾಗಿದೆ. ಇಬ್ಬರ ನಡುವೆ ಯಾವ ರೀತಿಯ ಸಂಪರ್ಕವಿತ್ತು? ಯಾವ ವಿಷಯ ಚರ್ಚೆಯಾಗುತ್ತಿತ್ತು? ಲೋಕಸಭಾ ಕಲಾಪಕ್ಕೆ ನುಗ್ಗಿದ್ದ ವಿಷಯ ಚರ್ಚೆಯಾಗಿತ್ತೇ? ಅದರಲ್ಲಿ ಇವರ ಪಾತ್ರವೇನಾದರೂ ಇತ್ತೇ ಎಂಬ ಬಗ್ಗೆ ವಿಚಾರಣೆ ನಡೆದಿದೆ’ ಎಂದು ಮೂಲಗಳು ತಿಳಿಸಿವೆ.
ಮನೋರಂಜನ್‌ಗೆ ಯಾವುದೇ ಕೆಲಸ ಇರಲಿಲ್ಲ. ಕಂಪನಿಯೊಂದರ ಹಿರಿಯ ಎಂಜಿನಿಯರ್ ಸಾಯಿಕೃಷ್ಣ ಕಡೆಯಿಂದ ಆರ್ಥಿಕ ನೆರವು ಸಿಗುತ್ತಿತ್ತೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗಿದೆ’ ಎಂದು ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.