ಬೆಳಗಾವಿ (ಸುವರ್ಣ ವಿಧಾನಸೌಧ): ‘ವಿದ್ಯುತ್ ಪ್ರಸರಣ ಕೇಂದ್ರಗಳ ಆಧುನೀಕರಣ ಹಾಗೂ ನಷ್ಟ ಕಡಿಮೆ ಮಾಡಲು ₹8,298 ಕೋಟಿ ಮೊತ್ತದ ಯೋಜನೆಗೆ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ‘ ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ತಿಳಿಸಿದರು.
ವಿಧಾನಸಭೆಯಲ್ಲಿ ಗುರುವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಡಾ. ಅವಿನಾಶ್ ಜಾಧವ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ’ಕೇಂದ್ರ ಸರ್ಕಾರದ ಜತೆಗೆ ಸಭೆ ಶುಕ್ರವಾರ ನಿಗದಿಯಾಗಿದ್ದು, ರಾಜ್ಯ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಈ ಸಭೆಯಲ್ಲಿ ಯೋಜನೆಗೆ ಒಪ್ಪಿಗೆ ಸಿಗುವ ನಿರೀಕ್ಷೆ ಇದೆ. ಜನವರಿ ಅಥವಾ ಫೆಬ್ರುವರಿಯಲ್ಲಿ ಟೆಂಡರ್ ಕರೆಯಲಾಗುವುದು‘ ಎಂದರು. ಜೆಸ್ಕಾಂ ಹಾಗೂ ಹೆಸ್ಕಾಂ ವ್ಯಾಪ್ತಿಯಲ್ಲಿ ₹3,089 ಕೋಟಿ ವೆಚ್ಚದಲ್ಲಿ ವಿದ್ಯುತ್ ಪ್ರಸರಣ ಕೇಂದ್ರಗಳ ಆಧುನೀಕರಣ ಮಾಡಲಾಗುತ್ತದೆ. 33 ಕೆ.ವಿ.ಯ 42 ವಿದ್ಯುತ್ ಕೇಂದ್ರಗಳನ್ನು ಹಾಗೂ 66 ಕೆ.ವಿ.ಯ 13 ಕೇಂದ್ರಗಳನ್ನು ಬಗೆಹರಿಸಲಾಗುವುದು. ಆಗ ವಿದ್ಯುತ್ ಕೇಂದ್ರದ ಬಹುತೇಕ ಸಮಸ್ಯೆ ಬಗೆಹರಿಯಲಿದೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.