ADVERTISEMENT

ಕೆಯುಡಬ್ಲ್ಯೂಜೆ ದತ್ತಿ ಪ್ರಶಸ್ತಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2023, 19:31 IST
Last Updated 6 ಮಾರ್ಚ್ 2023, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ನೀಡುವ ವಾರ್ಷಿಕ ದತ್ತಿ ಪ್ರಶಸ್ತಿಗಳನ್ನು ಸೋಮವಾರ ಪ್ರಕಟಿಸಲಾಗಿದೆ.

ಬಿ.ವಿ.ಮಲ್ಲಿಕಾರ್ಜುನಯ್ಯ (ಡಿವಿಜಿ ಪ್ರಶಸ್ತಿ), ಜಿ.ವೀರಣ್ಣ (ಪಾಟೀಲ ಪುಟ್ಟಪ್ಪ), ವಸಂತ ನಾಡಿಗೇರ (ಎಸ್.ವಿ.ಜಯಶೀಲರಾವ್‌), ಅರುಣಕುಮಾರ್ ಹಬ್ಬು (ಡಾ.ಎಂ.ಎಂ.ಕಲಬುರ್ಗಿ), ಕೆ.ಎನ್.ರವಿ(ಎಚ್.ಕೆ.ವೀರಣ್ಣಗೌಡ), ಚಂದ್ರಶೇಖರ ಸಿದ್ದಪ್ಪ ಜಿಗಜಿನ್ನಿ (ಕಿಡಿ ಶೇಷಪ್ಪ), ಮುಂಜಾನೆ ಸತ್ಯ (ಪಿ.ರಾಮಯ್ಯ), ಮೊಹಮ್ಮದ್ ಭಾಷಾ ಗೂಳ್ಯಂ (ಎಚ್.ಎಸ್.ದೊರೆಸ್ವಾಮಿ), ಎಂ.ಜಿ.ಪ್ರಭಾಕರ (ಪಿ.ರಾಮಯ್ಯ), ಶ್ರೀಶೈಲ ಗು.ಮಠದ (ಮ.ರಾಮಮೂರ್ತಿ), ಎನ್.ಬಸವರಾಜ್ (ಗರುಡನಗಿರಿ ನಾಗರಾಜ್), ಜಿ.ಆರ್.ಸತ್ಯಲಿಂಗರಾಜು (ಮಹದೇವ ಪ್ರಕಾಶ್‌), ನಾಗರಾಜ ಶೆಣೈ (ಶಿವಮೊಗ್ಗ ಮಿಂಚು ಶ್ರೀನಿವಾಸ), ಆರ್.ಎನ್.ಸಿದ್ಧಲಿಂಗ ಸ್ವಾಮಿ (ಎಚ್.ಎಸ್.ರಂಗಸ್ವಾಮಿ), ಡಾ.ಉಳ್ಳಿಯಡ ಎಂ. ಪೂವಯ್ಯ (ಎಂ.ನಾಗೇಂದ್ರರಾವ್), ಸಿರಾಜ್‌ ಬಿಸರಳ್ಳಿ (ಅಭಿಮಾನಿ ಪ್ರಕಾಶನ), ಜಯತೀರ್ಥ ಪಾಟೀಲ್ (ಗುಡಿಹಳ್ಳಿ ನಾಗರಾಜ್), ಸಿ.ಕೆ.ಮಹೇಂದ್ರ (ರಾಜಶೇಖರ ಕೋಟಿ), ಎಸ್.ಜಿ.ತುಂಗರೇಣುಕ (ಅಪ್ಪಾಜಿಗೌಡ ಸಿನಿಮಾ ಪ್ರಶಸ್ತಿ), ಡಿ.ಎನ್.ಶಾಂಭವಿ (ಗಿರಿಜಮ್ಮ ರುದ್ರಪ್ಪ ತಾಳಿಕೋಟೆ), ನಾರಾಯಣ ಹೆಗಡೆ (ಟಿ.ಕೆ.ಮಲಗೊಂಡ) ಪ್ರಶಸ್ತಿಗಳಿಗೆ ಆಯ್ಕೆಯಾಗಿದ್ದಾರೆ.

ಅತ್ಯುತ್ತಮ ಪುಟ ವಿನ್ಯಾಸಕ್ಕಾಗಿ ನೀಡುವ ಆರ್.ಶಾಮಣ್ಣ ಪ್ರಶಸ್ತಿ ‘ವಿಜಯ ಕರ್ನಾಟಕ’ಕ್ಕೆ ಲಭಿಸಿದೆ.

ADVERTISEMENT

ಜಯಲಕ್ಷ್ಮಿ ಸಂಪತ್ ಕುಮಾರ್, ಎಚ್.ಎನ್.ಆರತಿ, ಎಸ್.ಎಂ.ಜಂಬುಕೇಶ್ವರ, ಕೆ.ದೀಪಕ್‌ ಅವರನ್ನು ವಿಶೇಷ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ತಲಾ ₹ 5 ಸಾವಿರ ನಗದು, ಪ್ರಶಸ್ತಿ ಫಲಕ ಒಳಗೊಂಡಿದ್ದು, ಮೈಸೂರಿನಲ್ಲಿ ಮಾರ್ಚ್‌ 18ರಂದು ನಡೆಯುವ ಕಾರ್ಯಕ್ರಮದಲ್ಲಿ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.