ADVERTISEMENT

ಬಿ.ಎಸ್ಸಿ (ಅಗ್ರಿ), ಪಶುವೈದ್ಯಕೀಯ, ಆಯುಷ್: ಸೀಟು ಹಂಚಿಕೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 23:30 IST
Last Updated 13 ನವೆಂಬರ್ 2024, 23:30 IST
<div class="paragraphs"><p>ಕೆಇಎ</p></div>

ಕೆಇಎ

   

ಬೆಂಗಳೂರು: ಬಿ.ಎಸ್ಸಿ (ಅಗ್ರಿ), ಪಶು ವೈದ್ಯಕೀಯ ಕೋರ್ಸ್‌ಗಳ ಮತ್ತು ಆಯುಷ್‌ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬುಧವಾರ ಪ್ರಕಟಿಸಿದೆ.

ನ.14ರೊಳಗೆ ಶುಲ್ಕ ಪಾವತಿಸಿ, ನ.15ರೊಳಗೆ ಕಾಲೇಜುಗಳಿಗೆ ಪ್ರವೇಶ ಪಡೆಯಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.

ADVERTISEMENT

ಪಶು ವೈದ್ಯಕೀಯ ಕೋರ್ಸ್‌ನ 58 ಸೀಟು ಸೇರಿದಂತೆ ಒಟ್ಟು 338 ಸೀಟು ಹಂಚಿಕೆ‌ ಮಾಡಲಾಗಿದೆ. 1,800 ಅಭ್ಯರ್ಥಿಗಳು ಆಪ್ಷನ್‌ ದಾಖಲು‌ ಮಾಡಿದ್ದರು ಎಂದು ಮಾಹಿತಿ ನೀಡಿದ್ದಾರೆ.

ಬಿ.ಎಸ್‌ಸಿ ನರ್ಸಿಂಗ್: ಆಪ್ಷನ್‌ ದಾಖಲಿಸಲು ಅವಕಾಶ

ಬೆಂಗಳೂರು: ಬಿ.ಎಸ್‌ಸಿ ನರ್ಸಿಂಗ್‌ ಕೋರ್ಸ್ ಪ್ರವೇಶ ಸಲುವಾಗಿ ನಡೆಸುವ ವಿಶೇಷ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸಲು ಇಚ್ಛಿಸುವವರು, ನ.14ರ ಸಂಜೆ 6ರವರೆಗೆ ಆಪ್ಷನ್‌ ದಾಖಲಿಸಲು ಅವಕಾಶ ನೀಡಲಾಗಿದೆ.

ಹೊಸ ನರ್ಸಿಂಗ್ ಕಾಲೇಜು ಸ್ಥಾಪನೆ ಹಾಗೂ ಹೆಚ್ಚುವರಿ ಸೀಟುಗಳ ಲಭ್ಯತೆ ಕಾರಣಕ್ಕೆ ಮತ್ತಷ್ಟು ಸಮಯ ನೀಡಿದ್ದು, ಅಭ್ಯರ್ಥಿಗಳು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಕೆಇಎ ಹೇಳಿದೆ.

ಸೀಟು ಹಂಚಿಕೆ ಫಲಿತಾಂಶ ನ. 15ರ ಸಂಜೆ 6ಕ್ಕೆ ಪ್ರಕಟಿಸಲಾಗುತ್ತದೆ. ನ.19ರೊಳಗೆ ಶುಲ್ಕ ಪಾವತಿಸಿ, ಕಾಲೇಜುಗಳಿಗೆ ಪ್ರವೇಶ ಪಡೆಯಬಹುದು.

ಪಿಯು: ಬಿ.ಇಡಿ ವ್ಯಾಸಂಗದ ರಜೆಯೂ ಸೇವಾವಧಿ

ಬೆಂಗಳೂರು: ಬಿ.ಇಡಿ ಪದವಿ ಪಡೆಯದೇ 2013ರಲ್ಲಿ ನೇಮಕಗೊಂಡಿದ್ದ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸೇವೋತ್ತರ ವ್ಯಾಸಂಗದ ಅವಧಿಯನ್ನು (ಬಿ.ಇಡಿ ಕೋರ್ಸ್‌ಗೆ ಹಾಕಿದ್ದ ರಜೆ) ಅಸಾಧಾರಣ ರಜೆ ಎಂದು ಪರಿಗಣಿಸಿ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಆದೇಶ ಹೊರಡಿಸಿದೆ.

ಬಿ.ಇಡಿ ವ್ಯಾಸಂಗ ಪೂರೈಸಲು ಉಪನ್ಯಾಸಕರು ಹಾಕಿದ್ದ ವೇತನ ರಹಿತ ರಜೆಯ ಅವಧಿಯನ್ನು ಅಸಾಧಾರಣ ರಜೆ ಎಂದು ಆದೇಶ ಮಾಡಿರುವುದಿಂದ ಅವರಿಗೆ 10 ವರ್ಷಗಳ ಕಾಲಮಿತಿ ಬಡ್ತಿ ಹಾಗೂ 15 ವರ್ಷಗಳ ಹಿರಿಯ ವೇತನ ಶ್ರೇಣಿ ಮಂಜೂರು ಮಾಡಲು ಅನುಮತಿ ನೀಡಿದೆ.

ಉಪನ್ಯಾಸಕರ ಬಿ.ಇಡಿ ಶಿಕ್ಷಣದ ಅವಧಿಯನ್ನು ಕೆಸಿಎಸ್‌ಆರ್ ನಿಯಮದ ಅನ್ವಯ ಮಾತ್ರ ಕರ್ತವ್ಯದ ಅವಧಿ ಎಂದು ಪರಿಗಣಿಸಬೇಕು. ಈ ಅವಧಿಗೆ ಅವರು ಯಾವುದೇ ಸಂಭಾವನೆ ಪಡೆಯಲು ಅರ್ಹರಾಗಿರುವುದಿಲ್ಲ. ಆದರೆ, ಈ ಅವಧಿಯನ್ನು ಸೇವಾವಧಿ ಎಂದು ಪರಿಗಣಿಸಲಾಗುತ್ತದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.