ADVERTISEMENT

ಯುಜಿನೀಟ್‌: ಮಾಪ್‌ಅಪ್‌ನಲ್ಲಿ 596 ಸೀಟು

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2024, 16:30 IST
Last Updated 1 ಅಕ್ಟೋಬರ್ 2024, 16:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಯುಜಿನೀಟ್‌–2024ರ ಆನ್‌ಲೈನ್‌ ಮಾಪ್‌ಅಪ್‌ ಸುತ್ತಿನಲ್ಲಿ 596 ವೈದ್ಯಕೀಯ ಸೀಟುಗಳು ಲಭ್ಯವಿವೆ. ಸರ್ಕಾರಿ ಕೋಟಾ–7, ಖಾಸಗಿ ಕೋಟಾ–135, ಮ್ಯಾನೇಜ್‌ಮೆಂಟ್‌ ಕೋಟಾ–453 ಮತ್ತು ಅನಿವಾಸಿ ಭಾರತೀಯ ಕೋಟಾ–1 ಸೀಟು ಲಭ್ಯವಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿದೆ.

ಈ ಮಾಪ್‌ಅಪ್‌ ಸುತ್ತಿನಲ್ಲಿ ಭಾಗವಹಿಸಲು ಇಚ್ಛಿಸುವ ಅಭ್ಯರ್ಥಿಗಳು ಇದೇ 5ರಿಂದ 8ರವರೆಗೆ ವೈದ್ಯಕೀಯ ಕೋರ್ಸ್‌ ಶುಲ್ಕ ಠೇವಣಿ ಪಾವತಿಸಬೇಕು. ಎರಡನೇ ಸುತ್ತಿನ ಕಾಷನ್‌ ಡೆಪಾಸಿಟ್‌ ಪಾವತಿಸಿದ್ದು ಯಾವುದೇ ವೈದ್ಯಕೀಯ ಸೀಟು ಹಂಚಿಕೆಯಾಗದಿದ್ದರೆ, ಅಷ್ಟು ಮೊತ್ತವನ್ನು ಕಡಿತ ಮಾಡಿಕೊಂಡು ಉಳಿದ ಠೇವಣಿ ಪಾವತಿ ಮಾಡಬೇಕು. ಅವರು ತಮ್ಮ ಆಯ್ಕೆಗಳನ್ನು ದಾಖಲಿಸಲು ಅ.7ರಿಂದ 14ರವರೆಗೆ ಅವಕಾಶ ನೀಡಲಾಗುವುದು ಎಂದು ಪ್ರಾಧಿಕಾರ ತಿಳಿಸಿದೆ.

ADVERTISEMENT

ಮಾಪ್‌ಅಪ್‌ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿದ್ದು ಕಾಲೇಜಿಗೆ ಪ್ರವೇಶ ಪಡೆಯದೇ ಇದ್ದರೆ ಅಥವಾ ಸೀಟನ್ನು ರದ್ದುಗೊಳಿಸಲು ಇಚ್ಛಿಸಿದಲ್ಲಿ ಅವರು ಪಾವತಿಸಿರುವ ವೈದ್ಯಕೀಯ ಕೋರ್ಸ್‌ ಶುಲ್ಕ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ದಂಡವನ್ನೂ ವಿಧಿಸಲಾಗುವುದು ಎಂದು ಪ್ರಾಧಿಕಾರ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.