ADVERTISEMENT

ಪ್ರಜಾವಾಣಿ ಡೆಪ್ಯೂಟಿ ಎಡಿಟರ್ ಎಂ. ನಾಗರಾಜ ಅವರಿಗೆ ಖಾದ್ರಿ ಶಾಮಣ್ಣ ಪ್ರಶಸ್ತಿ

ಖಾದ್ರಿ ಶಾಮಣ್ಣ ಟ್ರಸ್ಟ್ ವತಿಯಿಂದ ನೀಡುವ ‘ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ’ ಹಿರಿಯ ಪತ್ರಕರ್ತರಾದ ‘ಪ್ರಜಾವಾಣಿ’ಯ ಡೆಪ್ಯೂಟಿ ಎಡಿಟರ್ ಎಂ. ನಾಗರಾಜ ಅವರಿಗೆ ಲಭಿಸಿದೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಜೂನ್ 2024, 9:50 IST
Last Updated 5 ಜೂನ್ 2024, 9:50 IST
<div class="paragraphs"><p>ಎಂ. ನಾಗರಾಜ</p></div>

ಎಂ. ನಾಗರಾಜ

   

ಬೆಂಗಳೂರು: ಖಾದ್ರಿ ಶಾಮಣ್ಣ ಟ್ರಸ್ಟ್ ವತಿಯಿಂದ ನೀಡುವ ‘ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ’ ಈ ಬಾರಿ ಹಿರಿಯ ಪತ್ರಕರ್ತರಾದ ‘ಪ್ರಜಾವಾಣಿ’ಯ ಡೆಪ್ಯೂಟಿ ಎಡಿಟರ್ ಎಂ. ನಾಗರಾಜ ಅವರಿಗೆ ಲಭಿಸಿದೆ.

ಪ್ರಶಸ್ತಿ ₹15 ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ. ಇದುವರೆಗೆ ಈ ಪ್ರಶಸ್ತಿಯನ್ನು 30 ಹಿರಿಯ ಪತ್ರಕರ್ತರು ಪಡೆದಿದಿದ್ದಾರೆ.

ADVERTISEMENT

ಎಂ. ನಾಗರಾಜ ಅವರು ಮೂಲತಃ ಮೈಸೂರು ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

1993ರಲ್ಲಿ ಪ್ರಜಾವಾಣಿ ಸೇರುವ ಮೊದಲು ಎಂ. ನಾಗರಾಜ ಅವರು ಮೈಸೂರು ಮಿತ್ರ, ಮಹಾನಂದಿ, ಸಾಧ್ವಿ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿದ್ದರು. ಪ್ರಜಾವಾಣಿ ಸೇರಿದ ನಂತರ ವರದಿಗಾರ, ಉಪಸಂಪಾದಕ, ಹಾಸನ ಜಿಲ್ಲಾ ವರದಿಗಾರ, ಬೆಂಗಳೂರಿನ ಮುಖ್ಯ ವರದಿಗಾರ, ಹುಬ್ಬಳ್ಳಿ ಬ್ಯೂರೊ ಮುಖ್ಯಸ್ಥರಾಗಿದ್ದರು. ನಂತರ ಪ್ರಜಾವಾಣಿ ಕೇಂದ್ರ ಕಚೇರಿಯಲ್ಲಿ ಸುದ್ದಿ ಸಂಪಾದಕರಾಗಿದ್ದ ಅವರು, 2018ರಿಂದ ಡೆಪ್ಯೂಟಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕರ್ನಾಟಕದ ಹೆಸರಾಂತ ಪತ್ರಕರ್ತರು, ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಮೇಲುಕೋಟೆ ಮೂಲದ ಖಾದ್ರಿ ಶಾಮಣ್ಣ ಅವರು, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಕನ್ನಡಪ್ರಭ ಪತ್ರಿಕೆಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುವ ಮೂಲಕ ಪತ್ರಿಕೋದ್ಯಮಕ್ಕೆ ಅನುಪಮ ಸೇವೆ ಸಲ್ಲಿಸಿದ್ದರು.

ನಾಗರಾಜ ಅವರಿಗೆ ಈ ಪ್ರಶಸ್ತಿ ನೀಡಲು ಖಾದ್ರಿ ಶಾಮಣ್ಣ ಟ್ರಸ್ಟ್ ಸಂತಸ ವ್ಯಕ್ತಪಡಿಸುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭ ಶೀಘ್ರದಲ್ಲೇ ನಡೆಯಲಿದೆ. ಕಳೆದ ವರ್ಷ, ಬಳ್ಳಾರಿಯಲ್ಲಿ ಪ್ರಜಾವಾಣಿಯ ವಿಶೇಷ ವರದಿಗಾರರಾಗಿದ್ದ ಹೊನಕೆರೆ ನಂಜುಂಡೆಗೌಡ ಅವರಿಗೆ ಈ ಪ್ರಶಸ್ತಿ ನೀಡಲಾಗಿತ್ತು ಎಂದು ಟ್ರಸ್ಟ್ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.