ಕುಂದಾಪುರ: ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕಾಗಿ ಕುಂಭಾಶಿಯ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದಲ್ಲಿ ನಿರ್ಮಾಣವಾದ ನೂತನ ಬ್ರಹ್ಮ ರಥದ ಕೊಲ್ಲೂರು ಪುರ ಪ್ರವೇಶಕ್ಕಾಗಿ ಬುಧವಾರ ಬೆಳಿಗ್ಗೆ ಕೋಟೇಶ್ವರದ ಕೋಟಿಲಿಂಗೇಶ್ವರ ದೇವಸ್ಥಾನದಿಂದ ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ಚಾಲನೆ ನೀಡಲಾಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ವೀಣಾ ಬಿ.ಎನ್., ರಥ ಶಿಲ್ಪಿ ಕೆ.ಲಕ್ಷ್ಮೀನಾರಾಯಣ ಆಚಾರ್ಯ, ಉದ್ಯಮಿ ಸುನಿಲ್ ಆರ್. ಶೆಟ್ಟಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ, ಕೋಟ ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೋಟ ಆನಂದ ಸಿ. ಕುಂದರ್, ಕೋಟೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣ ಗೊಲ್ಲ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಗಣೇಶ್ ಕಿಣಿ ಬೆಳ್ವೆ, ಜಯಾನಂದ ಹೋಬಳಿದಾರ್, ಗೋಪಾಲಕೃಷ್ಣ ನಾಡ, ಸಂಧ್ಯಾ ರಮೇಶ್, ರತ್ನಾ ರಮೇಶ್ ಕುಂದರ್, ಕೆ.ಪಿ.ಶೇಖರ ಪೂಜಾರಿ, ಡಾ.ಅತುಲ್‌ಕುಮಾರ ಶೆಟ್ಟಿ, ಎಪಿಎಂಸಿ ಸದಸ್ಯ ಸುಧೀರ್ ಕೆ.ಎಸ್., ಲೋಕೇಶ್ ಅಂಕದಕಟ್ಟೆ, ಸುರೇಶ್ ಶೆಟ್ಟಿ ಗೋಪಾಡಿ, ಕೃಷ್ಣದೇವ ಕಾರಂತ್ ಕೋಣಿ, ರಮೇಶ್ ಗಾಣಿಗ ಕೊಲ್ಲೂರು, ಡಾ.ಸುಧಾಕರ ನಂಬಿಯಾರ್, ಗುರುರಾಜ್ ಎಂಜಿನಿಯರ್, ಸುರೇಶ್ ಬೆಟ್ಟಿನ್, ಶಿಲ್ಪಿಗಳಾದ ರಾಜಗೋಪಾಲ ಆಚಾರ್ಯ, ಶಂಕರ ಆಚಾರ್ಯ, ಗಣಪತಿ ಆಚಾರ್ಯ, ಚಂದ್ರಿಕಾ ಧನ್ಯ, ಶಾರದಾ ಮೂಡುಗೋಪಾಡಿ, ಸುಜಾತ ರಮೇಶ್, ಉಷಾ ಮಾರ್ಕೋಡು, ಮಂಜುನಾಥ ಆಚಾರ್ ಅರಸರ ಬೆಟ್ಟು, ವಿಶಾಲಾಕ್ಷಿ ಶೆಟ್ಟಿ ಮೂಡುಗೋಪಾಡಿ, ಜಗದೀಶ್ ಮೊಗವೀರ ಇದ್ದರು.
ಕೋಟೇಶ್ವರದ ಕೋಟಿಲಿಂಗೇಶ್ವರ ದೇವಸ್ಥಾನದ ಋತ್ವಿಜರು ಕೋಟಿಲಿಂಗೇಶ್ವರನಿಗೆ ಪೂಜೆ ಸಲ್ಲಿಸಿದ ನಂತರ ಬ್ರಹ್ಮರಥದ ಪುರ ಪ್ರವೇಶ ಮೆರವಣಿಗೆಗೆ ಚಾಲನೆ ನೀಡಲಾಯಿತು. ರಥ ಬರುವಿಕೆ ಕಾಯುತ್ತಿದ್ದ ಭಕ್ತರು ಸಂಭ್ರಮದಿಂದ ರಥವನ್ನು ಬರಮಾಡಿಕೊಂಡರು. ಕೋಟೇಶ್ವರ, ಕುಂದಾಪುರ, ತಲ್ಲೂರು, ಹೆಮ್ಮಾಡಿ, ಕಟ್‌ಬೇಲ್ತೂರು, ಬಗ್ವಾಡಿ, ವಂಡ್ಸೆ, ಚಿತ್ತೂರು, ಇಡೂರು ಮುಂತಾದ ಕಡೆಗಳಲ್ಲಿ ಭಕ್ತರು ಬ್ರಹ್ಮ ರಥಕ್ಕೆ ಪುಷ್ಪಾರ್ಚನೆ ಮಾಡಿ ಧನ್ಯತೆ ಅನುಭವಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.