ADVERTISEMENT

ದೇಶದ್ರೋಹದ ವಿಚಾರದಲ್ಲಿ ಸಿದ್ದು, ಪಿಎಫ್ಐ ಒಂದೇ: ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 9:57 IST
Last Updated 20 ಫೆಬ್ರುವರಿ 2021, 9:57 IST
ಕೆ.ಎಸ್.ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ   

ಯಾದಗಿರಿ: ‘ದೇಶದ್ರೋಹದ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಪಿಎಫ್ಐ ಇಬ್ಬರು ಒಂದೇ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಪ್ರಗತಿ ಪರಿಶೀಲನೆ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ್ರೋಹದ ವಿಚಾರದಲ್ಲಿ ಸ್ಪರ್ಧೆಗೆ ಬಿದ್ದವರಂತೆ ನಾ ಮುಂದು ತಾ ಮುಂದು ಅಂತ‌ ಮುನ್ನುಗ್ಗುತ್ತಿದ್ದಾರೆ. ಗೋವಿನ ಶಾಪದಿಂದ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು. ಸರ್ಕಾರ ಕಳೆದುಕೊಂಡರು. ಆದರೂ ಬುದ್ಧಿ ಬಂದಿಲ್ಲ. ಈಗ ಮತ್ತೆ ರಾಮನ‌ ವಿಚಾರದಲ್ಲಿ ಮಾತನಾಡಿದ್ದರಿಂದ ಕಾಂಗ್ರೆಸ್ನೆಲದೊಳಗೆ ಹೋಗುತ್ತೆ ಎಂದು ಹೇಳಿದರು.

ರಾಮಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್‌ನಲ್ಲಿರುವ ಅನೇಕರು ದೇಣಿಗೆ ನೀಡಿದ್ದಾರೆ. ದೇಶದ ಅನೇಕ ಮುಸ್ಲಿಮರು ದೇಣಿಗೆ ನೀಡಿದ್ದಾರೆ’ ಎಂದರು.

ADVERTISEMENT

‘ದೇಶದಲ್ಲಿ ಸಿದ್ದರಾಮಯ್ಯ ಮತ್ತು ಪಿಎಫ್ಐ ಮಾತ್ರ ದೇಣಿಗೆ ನೀಡಿಲ್ಲ. ಸಿದ್ದರಾಮಯ್ಯ ರಾಮಮಂದಿರ ನಿರ್ಮಾಣ ದೇಣಿಗೆಯ ಲೆಕ್ಕ ಕೇಳತ್ತಾರೆ. ಒಂದು ರೂಪಾಯಿ ದುಡ್ಡು ಕೊಡುವುದಿಲ್ಲ ಅಂದ ಮೇಲೆ ಲೆಕ್ಕ ಕೇಳುವುದು ಇವರು ಯಾರು’ ಎಂದು ಪ್ರಶ್ನಿಸಿದರು.

‘ಸುಪ್ರೀಂ ಕೋರ್ಟ್ ಮೇಲೆ ಸಿದ್ದರಾಮಯ್ಯನವರಿಗೆ ನಂಬಿಕೆ ಇಲ್ವಾ?. ಸಂವಿಧಾನದ ಅರೆದು ಕುಡಿದವರಂತೆ ಮಾತನಾಡುತ್ತಾರೆ. ಅಂಬೇಡ್ಕರ್ ಬಿಟ್ಟರೆ ನಾನೇ ತಿಳಿವಳಿಕೆಸ್ಥ ಎನ್ನುತ್ತಾರೆ. ಆದರೂ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಮಾತನಾಡುತ್ತಾರೆ’ ಎಂದು ವ್ಯಂಗ್ಯವಾಡಿದರು.

‘ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳು ನಿಗದಿತ ಸಮಯದಲ್ಲಿ ನಡೆಯುತ್ತವೆಯೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಿಗದಿ ಅವಧಿಯಲ್ಲಿ ಚುನಾವಣೆ ನಡೆಯುತ್ತದೆ. ಏಪ್ರಿಲ್‌ ಅಥವಾ ಮೇ ತಿಂಗಳಲ್ಲಿ ನಡೆಯುತ್ತವೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.