ADVERTISEMENT

ಬಸ್‌ ನಿಲ್ದಾಣಗಳಲ್ಲಿ ಧೂಮಪಾನ: ₹2.62 ಕೋಟಿ ದಂಡ ವಸೂಲಿ

​ಪ್ರಜಾವಾಣಿ ವಾರ್ತೆ
Published 1 ಜೂನ್ 2019, 20:27 IST
Last Updated 1 ಜೂನ್ 2019, 20:27 IST
ವಿಶ್ವ ತಂಬಾಕು ಮುಕ್ತ ದಿನಾಚರಣೆಯನ್ನು ಚಾಲಕ ಮತ್ತು ನಿರ್ವಾಹಕರು ಸಿಗರೇಟಿಗೆ ನೀರು ಸುರಿಯುವ ಮೂಲಕ ಉದ್ಘಾಟಿಸಿದರು. ಪಿ.ಎಸ್. ಹರ್ಷ, ಪಿ.ಆರ್. ಶಿವಪ್ರಸಾದ್, ಆರೋಗ್ಯ ಇಲಾಖೆ ಉಪನಿರ್ದೇಶಕ ವಿವೇಕ್‌ ದೊರೈ ಇದ್ದರು
ವಿಶ್ವ ತಂಬಾಕು ಮುಕ್ತ ದಿನಾಚರಣೆಯನ್ನು ಚಾಲಕ ಮತ್ತು ನಿರ್ವಾಹಕರು ಸಿಗರೇಟಿಗೆ ನೀರು ಸುರಿಯುವ ಮೂಲಕ ಉದ್ಘಾಟಿಸಿದರು. ಪಿ.ಎಸ್. ಹರ್ಷ, ಪಿ.ಆರ್. ಶಿವಪ್ರಸಾದ್, ಆರೋಗ್ಯ ಇಲಾಖೆ ಉಪನಿರ್ದೇಶಕ ವಿವೇಕ್‌ ದೊರೈ ಇದ್ದರು   

ಬೆಂಗಳೂರು:2013ರ ಏಪ್ರಿಲ್‌ನಿಂದ ಈವರೆಗೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಗಳಲ್ಲಿ ಧೂಮಪಾನ ಮಾಡಿದ 1.31 ಲಕ್ಷ ಪ್ರಯಾಣಿಕರಿಗೆ ₹2.62 ಕೋಟಿ ದಂಡ ವಿಧಿಸಲಾಗಿದೆ ಎಂದು ನಿಗಮದ ಭದ್ರತಾ ಮತ್ತು ಜಾಗೃತ ನಿರ್ದೇಶಕ ಪಿ.ಎಸ್. ಹರ್ಷ ತಿಳಿಸಿದರು.

ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ವಿಶ್ವ ತಂಬಾಕು ಮುಕ್ತ ದಿನಾಚರಣೆ’ಯನ್ನು ಸಿಗರೇಟು ಮತ್ತು ತಂಬಾಕಿನ ಮೇಲೆ ನೀರು ಸುರಿಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

4,800 ಕೆಮಿಕಲ್‌ಗಳಿಂದ ಒಂದು ಸಿಗರೇಟ್ ತಯಾರಿಸಲಾಗುತ್ತಿದೆ. ಇದು ಆರೋಗ್ಯಕ್ಕೆ ಅತ್ಯಂತ ನಿಕಾರಕ.ಭಾರತದಲ್ಲಿ‍ಪ್ರತಿವರ್ಷ 70 ಲಕ್ಷ ಜನರು ನೇರವಾಗಿ ತಂಬಾಕು ಸೇವನೆಯಿಂದ, 8ರಿಂದ 10 ಲಕ್ಷ ಜನಪರೋಕ್ಷ ಸೇವನೆಯಿಂದ ಬಲಿಯಾಗುತ್ತಿದ್ದಾರೆ ಎಂದು ಹೇಳಿದರು.

ADVERTISEMENT

‘ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ಮಾಡುವುದು ಅಪರಾಧ. ಉಲ್ಲಂಘಿಸಿದವರಿಗೆ ₹200 ರವರೆಗೆ ದಂಡ ವಿಧಿಸಲಾಗುವುದು.ಪ್ರತಿದಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಸುಮಾರು 1.25 ಲಕ್ಷ ಜನ ಪ್ರಯಾಣಿಸುತ್ತಾರೆ. ಇಲ್ಲಿ ತಂಬಾಕು ಉತ್ಪನ್ನಗಳ ಪ್ರಚಾರ, ಮಾರಾಟ, ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ’ ಎಂದು ನಿಗಮದ ಸಿಬ್ಬಂದಿ ಮತ್ತು ಪರಿಸರ ವಿಭಾಗದ ನಿರ್ದೇಶಕ ಪಿ.ಆರ್. ಶಿವಪ್ರಸಾದ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.