ಬೆಂಗಳೂರು: 2014ರಲ್ಲಿಎಂಎಲ್‌ಸಿ ಸ್ಥಾನಕ್ಕಾಗಿ ₹25 ಕೋಟಿ ಆಮಿಷ ಒಡ್ಡಿದ್ದರು ಎಂದು ತಮ್ಮ ವಿರುದ್ಧ ಬಿ.ಎಸ್.ಯಡಿಯೂರಪ್ಪ ಮಾಡಿದ್ದ ಆರೋಪಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಆ ಪ್ರಕರಣವನ್ನು ಇಲ್ಲಿಯವರೆಗೆ ಯಾಕೆ ತನಿಖೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಅದು ನಮ್ಮ ಮನೆಯಲ್ಲಿ ನಡೆದಿದ್ದ ಘಟನೆ. ನಮ್ಮ ಪಕ್ಷದ ಕಾರ್ಯಕರೊಂದಿಗೆ ನಡೆಸಿದ್ದ ಮಾತುಕತೆ. ಆದರೆ ಯಡಿಯೂರಪ್ಪನವರು ಯಾವ ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡಿದ್ದಾರೆ? ಆ ಪ್ರಕರಣವನ್ನು ಇದರೊಂದಿಗೆ ಹೋಲಿಸಿಕೊಳ್ಳುವುದು ಯಾಕೆ?ಎಂದರು.
ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ನಾಯಕರುಯಾವ ಪಕ್ಷದ ಕಾರ್ಯಕರ್ತರೇ ಆಗಿರಲಿ. ಆಮಿಷ ಒಡ್ಡುವುದು ತಪ್ಪಲ್ಲವೇ ಎಂದು ಪ್ರಶ್ನಿಸಿದರು.
ಚರ್ಚೆ ಮುಂದುವರಿದಂತೆ ಕುಮಾರಸ್ವಾಮಿ ಅವರು ಆಪರೇಷನ್ ಕಮಲದ ಬಗ್ಗೆ ಮಾತನಾಡಿದರು. ಈ ವೇಳೆ ಸಿಟ್ಟಿಗೆದ್ದ ಬಿಜೆಪಿ ನಾಯಕರು ಸಿಎಂಮಾತಿಗೆ ಅಡ್ಡಿಪಡಿಸಿದರು. ಗದ್ದಲ ನಿಯಂತ್ರಣಕ್ಕೆ ಬಾರದಿದ್ದಾಗಸಭಾಧ್ಯಕ್ಷರು ಕಲಾಪವನ್ನು 15 ನಿಮಿಷಗಳ ವರೆಗೆ ಮುಂದೂಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.