ADVERTISEMENT

ಕುಂದಗೋಳ ಉಪ ಚುನಾವಣೆ ಒಂದು ಕೆ.ಜಿ ಚಿನ್ನ ವಶ

​ಪ್ರಜಾವಾಣಿ ವಾರ್ತೆ
Published 5 ಮೇ 2019, 19:51 IST
Last Updated 5 ಮೇ 2019, 19:51 IST
ಕಲಘಟಗಿ ತಾಲ್ಲೂಕಿನ ಸಂಗಟಿಕೊಪ್ಪ ಚೆಕ್‌ ಪೋಸ್ಟ್‌ನಲ್ಲಿ ಭಾನುವಾರ ಪೊಲೀಸರು ವಶಪಡಿಸಿಕೊಂಡಿರುವ ಬಂಗಾರದ ಆಭರಣ
ಕಲಘಟಗಿ ತಾಲ್ಲೂಕಿನ ಸಂಗಟಿಕೊಪ್ಪ ಚೆಕ್‌ ಪೋಸ್ಟ್‌ನಲ್ಲಿ ಭಾನುವಾರ ಪೊಲೀಸರು ವಶಪಡಿಸಿಕೊಂಡಿರುವ ಬಂಗಾರದ ಆಭರಣ   

ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಉಪಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬರ ಪರವಾಗಿ ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ₹30 ಲಕ್ಷ ಮೌಲ್ಯದ 1,118 ಗ್ರಾಂ ಚಿನ್ನದ ಒಡವೆಗಳನ್ನು ಕಲಘಟಗಿ ತಾಲ್ಲೂಕಿನ ಸಂಗಟಿಕೊಪ್ಪ ಚೆಕ್‌ ಪೋಸ್ಟ್‌ನಲ್ಲಿ ಪೊಲೀಸರು ಭಾನುವಾರ ವಶಪಡಿಸಿಕೊಂಡಿದ್ದಾರೆ.

ಕಾರವಾರದ ಸತೀಶ ಪಾಂಡುರಂಗ ಶೇಟ್‌ ಎಂಬುವರು ಅಂಕೋಲಾ ತಾಲ್ಲೂಕಿನ ಬಾಳೆಗುಳಿ ಕ್ರಾಸ್‌ನಿಂದ ಹುಬ್ಬಳ್ಳಿ ಕಡೆಗೆ ಕಾರೊಂದರಲ್ಲಿ ಈ ಆಭರಣಗಳನ್ನು ಸಾಗಿಸುತ್ತಿದ್ದರು.

ಸಂಗಟಿಕೊಪ್ಪ ಚೆಕ್ ಪೋಸ್ಟ್‌ನಲ್ಲಿ ತಪಾಸಣೆಗೆ ಒಳಪಡಿಸಿದಾಗ ಸಮರ್ಪಕ ದಾಖಲೆಗಳನ್ನು ಒದಗಿಸಿಲ್ಲ. ಆದರೆ, ಆಭರಣಗಳನ್ನು ಹುಬ್ಬಳ್ಳಿ ಮಾಳಸಾ ಜ್ಯುವೆಲ್ಲರಿಗೆ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ADVERTISEMENT

ಕುಂದಗೋಳ ಉಪಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಒಯ್ಯುತ್ತಿರಬಹುದೆಂಬ ಸಂದೇಹದ ಮೇರೆಗೆ ಚೆಕ್ ಪೋಸ್ಟ್‌ ತಪಾಸಣೆ ಅಧಿಕಾರಿ ವೆಂಕಟೇಶ ಕಟ್ಟಿ ಅವರು ದೂರು ದಾಖಲಿಸಿದ್ದಾರೆ ಎಂದು ಕುಂದಗೋಳ ಚುನಾವಣಾಧಿಕಾರಿ ವಿ. ಪ್ರಸನ್ನ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.