ADVERTISEMENT

ಕುಂದಗೋಳ ಉಪಚುನಾವಣೆ: ದಾಖಲೆ ಇಲ್ಲದ ₹30 ಲಕ್ಷ ಹಣ ವಶ

ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ವೇಳೆ ಪತ್ತೆ

​ಪ್ರಜಾವಾಣಿ ವಾರ್ತೆ
Published 7 ಮೇ 2019, 9:29 IST
Last Updated 7 ಮೇ 2019, 9:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹುಬ್ಬಳ್ಳಿ:ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹ 30 ಲಕ್ಷವನ್ನು ಹುಬ್ಬಳ್ಳಿ ಹೊರ ವಲಯದ ಅಗಡಿ ಚೆಕ್‌ಪೋಸ್ಟ್‌ನಲ್ಲಿ ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಕುಂದಗೋಳ ಉಪ ಚುನಾವಣೆ ಹಿನ್ನೆಲೆಯಲ್ಲಿ ಅಗಡಿ ಬಳಿ ಚೆಕ್‌ಪೋಸ್ಟ್ ಆರಂಭಿಸಾಗಿದೆ. ಸೋಮವಾರ ಸಂಜೆ ತಪಾಸಣೆ ವೇಳೆ ₹42 ಲಕ್ಷ ಪತ್ತೆಯಾಯಿತು. ಹಣ ಆ್ಯಕ್ಸಿಸ್ ಬ್ಯಾಂಕ್‌ಗೆ ಸೇರಿದ್ದು ಎಂದು ತಿಳಿಸಿದ ಅಧಿಕಾರಿಗಳು, ₹12 ಲಕ್ಷಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮಾತ್ರ ಸ್ಥಳದಲ್ಲೇ ತೋರಿಸಿದರು. ಆದ್ದರಿಂದ ದಾಖಲೆ ಇಲ್ಲದ ₹30 ಲಕ್ಷವನ್ನು ಜಪ್ತಿ ಮಾಡಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

₹30 ಲಕ್ಷಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಹ ಆ ನಂತರ ಒದಗಿಸಿದ್ದಾರೆ. ಆದರೆ ನಿಯಮದ ಪ್ರಕಾರ ಸಿಇಒ ನೇತೃತ್ವದ ಸಮಿತಿ ಮುಂದೆಯೇ ಮೇಲ್ಮನವಿ ಮಾಡಿ ಹಣವನ್ನು ವಾಪಸ್ ಪಡೆದುಕೊಳ್ಳಬೇಕು ಎಂದು ಅವರು ಮಾಹಿತಿ ನೀಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.