ಮೈಸೂರು: ‘ಪ್ರೊ.ಕೆ.ಎಸ್.ಭಗವಾನ್ ಅವರ ಕೃತಿಯಲ್ಲಿ ರಾಮ ಹಾಗೂ ಸೀತೆಯು ಮದ್ಯಪಾನ ಮಾಡುತ್ತಿದ್ದರು, ಮಾಂಸಾಹಾರ ಸೇವನೆ ಮಾಡುತ್ತಿದ್ದರು ಎಂದು ಹೇಳಿರುವ ಮೂಲಕ ಭಾರತೀಯರ ಭಾವನೆಗಳಿಗೆ ನೋವು ಉಂಟು ಮಾಡಲಾಗಿದೆ’ ಎಂದು ಸಂಶೋಧಕ ಪ್ರೊ.ಎಂ.ಚಿದಾನಂದಮೂರ್ತಿ ವಿಷಾದ ವ್ಯಕ್ತಪಡಿಸಿದರು.
ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಹಾಗೂ ದೇಜಗೌ ಟ್ರಸ್ಟ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕುವೆಂಪು ಜಯಂತಿ ಅಂಗವಾಗಿನ ಕಾರ್ಯಕ್ರಮದಲ್ಲಿ ‘ಕರ್ನಾಟಕ ರತ್ನ ನಾಡೋಜ ದೇಜಗೌ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.
‘ಕುವೆಂಪು ಅವರು ನೊಂದುಕೊಳ್ಳುವಂತಹ, ಆಘಾತಪಡುವಂತಹ ಕೃತಿಯನ್ನು ಭಗವಾನ್ ಬರೆದಿದ್ದಾರೆ. ಭಗವಾನ್ ಮಾತನ್ನು ಕುವೆಂಪು ಈಗ ಕೇಳಿದ್ದರೆ ಏನು ಹೇಳುತ್ತಿದ್ದರೋ ಏನೋ. ಅತ್ಯಂಕ ಆಘಾತಕಾರಿಯೂ ಖಂಡನಾರ್ಹವೂ ಆದ ಕೃತಿಯಿದು’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.