ಬೆಂಗಳೂರು: ‘ಕೇಂದ್ರ ಸರ್ಕಾರ ಅಗ್ನಿಪಥಯೋಜನೆ ಬಗ್ಗೆ ಮರು ಚಿಂತನೆ ಮಾಡಬೇಕು’ ಎಂದು ರಾಜ್ಯಸಭೆ ಕಾಂಗ್ರೆಸ್ ಸದಸ್ಯ ಎಲ್. ಹನುಮಂತಯ್ಯ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಈ ಯೋಜನೆಗೆ ಹರಿಯಾಣ, ಬಿಹಾರ, ತೆಲಂಗಾಣದ ಯುವ ಜನಾಂಗ ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದೆ. ಇದರಿಂದ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗುತ್ತಿದೆ. ರೈಲುಗಳಿಗೆ ಬೆಂಕಿ ಹಾಕಲಾಗಿದೆ. ಕಾಂಗ್ರೆಸ್ ಕೂಡ ಯೋಜನೆಯ ಬಗ್ಗೆ ಮರು ಚಿಂತನೆ ಮಾಡಲು ಒತ್ತಾಯಿಸಿದೆ’ ಎಂದರು.
‘ಈ ಯೋಜನೆ ದೇಶವನ್ನು ಅಗ್ನಿಗೆಆಹುತಿಯಾಗುವ ಪರಿಸ್ಥಿತಿ ನಿರ್ಮಾಣ ಮಾಡಿದೆ. ಕಾಂಗ್ರೆಸ್ ಯುವಕರ ಪರವಾಗಿದ್ದು, ಅವರಿಗೆ ಉದ್ಯೋಗ ನೀಡುವುದರ ಪರವಾಗಿದೆ. ಸರ್ಕಾರಅವರಿಗೆ ಅರೆಕಾಲಿಕ ಹುದ್ದೆ ನೀಡುವುದನ್ನು ನಿಲ್ಲಿಸಿ, ಪೂರ್ಣಾವಧಿ ಉದ್ಯೋಗ ನೀಡಬೇಕು. ಇದುವರೆಗೂ ಸೇನೆಯ ನೇಮಕಾತಿ ಹೇಗೆ ಮಾಡಲಾಗುತ್ತಿತ್ತೋ ಆಮೂಲಕ ನೇಮಕಾತಿ ಆರಂಭಿಸಬೇಕು. ಈ ಯೋಜನೆ ನಿರುದ್ಯೋಗ ನಿವಾರಣೆ ಮಾಡುವ ಯೋಜನೆ ಅಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.