ಬೆಂಗಳೂರು: ಕೃಷಿಕರಲ್ಲದವರೂ ಕೃಷಿ ಭೂಮಿ ಖರೀದಿಸಬಹುದೆಂದು ನಿಯಮ ಸಡಿಲಿಸಿದ ಪರಿಣಾಮ, ರಾಜ್ಯದಲ್ಲಿ ಕೃಷಿ ಭೂಮಿಯನ್ನು ಕೃಷಿಯೇತರ ಬಳಕೆಗೆ ಪರಿವರ್ತಿಸಲು ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆ ಶೇ 71ರಷ್ಟು ಹೆಚ್ಚಿದೆ!
ಕಳೆದ ವರ್ಷ ಭೂ ಪರಿವರ್ತನೆಗೆ 57,002 ಅರ್ಜಿಗಳು ಸಲ್ಲಿಕೆಯಾಗಿದ್ದರೆ, ಈ ವರ್ಷ ಸೆಪ್ಟೆಂಬರ್‌ವರೆಗೆ 97,718 ಅರ್ಜಿಗಳು ಸಲ್ಲಿಕೆ ಆಗಿವೆ.
‘ಕೃಷಿಕರಲ್ಲದವರೂ ಕೃಷಿ ಭೂಮಿ ಖರೀದಿಸಬಹುದೆಂದು ಎರಡು ವರ್ಷಗಳ ಹಿಂದೆ ನಿಯಮ ಬದಲಿಸಲಾಗಿದೆ. ಆ ನಂತರ, ಕೃಷಿ ಭೂಮಿ ಪರಿವರ್ತನೆಗಾಗಿ ಸಲ್ಲಿಕೆಯಾಗುವ ಅರ್ಜಿ ಗಣನೀಯವಾಗಿ ಹೆಚ್ಚಳವಾಗಿದೆ’ ಎಂದು ಕಂದಾಯ ಇಲಾಖೆಯ ಎಸಿಎಸ್ ಕಪಿಲ್ ಮೋಹನ್ ತಿಳಿಸಿದರು.
ಬೆಂಗಳೂರು ನಗರ ಜಿಲ್ಲೆಯಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಏರುಗತಿಯಲ್ಲಿದ್ದು, ಕೃಷಿಯೇತರ ಬಳಕೆಗೆ ಭೂಮಿ ಪರಿವರ್ತಿಸಲು ಈ ವರ್ಷ 6,338 ಅರ್ಜಿಗಳು ಸಲ್ಲಿಕೆ ಆಗಿವೆ. ಕಳೆದ ವರ್ಷ ಇಂತಹ ಅರ್ಜಿಗಳ ಸಂಖ್ಯೆ 4,331 ಆಗಿತ್ತು ಎಂದು ಕ್ರೆಡೈ (ಬೆಂಗಳೂರು) ಘಟಕದ ಅಧ್ಯಕ್ಷ ಸುರೇಶ್ ಹರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.