ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಮೂರು ಹಾಗೂ ಐದು ವರ್ಷಗಳ ಕಾನೂನು ಪದವಿ ಪರೀಕ್ಷೆಗಳನ್ನು ಆ.21ರಿಂದ ಸೆ.15ರವರೆಗೆ ನಿಗದಿ ಮಾಡಿದ್ದು, ಭಾನುವಾರವೂ ಪರೀಕ್ಷೆ ನಡೆಸುವುದಕ್ಕೆ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಾಲೇಜು ಮಟ್ಟದ ಎಲ್ಲ ಪರೀಕ್ಷೆಗಳೂ ರಜಾ ದಿನಗಳನ್ನು ಹೊರತುಪಡಿಸಿ ನಡೆಯುತ್ತವೆ. ಆದರೆ, ಕಾನೂನು ವಿಶ್ವವಿದ್ಯಾಲಯ ಇದೇ ಮೊದಲ ಬಾರಿ ಭಾನುವಾರವೂ ಪರೀಕ್ಷೆ ನಿಗದಿ ಮಾಡಿದೆ. ಆ.21ರಿಂದ ಸೆ.15ರವರೆಗೆ ಇರುವ ನಾಲ್ಕು ಭಾನುವಾರವೂ ಪರೀಕ್ಷೆ ಇದೆ. ಇದು ಸರಿಯಾದ ವಿಧಾನವಲ್ಲ ಎಂದು ದೂರಿದ್ದಾರೆ.
ಆ.25 ಹಾಗೂ ಸೆ.1ರಂದು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ), ಎನ್‌ಡಿಎ (ನ್ಯಾಶನಲ್ ಡಿಫೆನ್ಸ್ ಅಕಾಡೆಮಿ ಮತ್ತು ನೇವಲ್ ಅಕಾಡೆಮಿ) ಪರೀಕ್ಷೆಗಳು ನಿಗದಿಯಾಗಿವೆ. ಮೂರು ವರ್ಷದ ಕಾನೂನು ಪದವಿಯ ಪರೀಕ್ಷೆ ಬರೆಯುತ್ತಿರುವ ಹಲವರು ಪರೀಕ್ಷೆ ತೆಗೆದುಕೊಂಡಿದ್ದಾರೆ. ಅಂಥವರಿಗೆ ಅನ್ಯಾಯವಾಗುತ್ತದೆ. ಸೆ. 8ರಂದು ಸಂತ ಮೇರಿ ಉತ್ಸವ, 15ರಂದು ತಿರು ಓಣಂ ಇರುತ್ತದೆ. ಹಾಗಾಗಿ, ನಾಲ್ಕು ಭಾನುವಾರವೂ ಪರೀಕ್ಷೆ ಮುಂದೂಡಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.