ADVERTISEMENT

ಅತೃಪ್ತ ಶಾಸಕರ ಪರ ಸ್ಪೀಕರ್‌ ಭೇಟಿಯಾದ ವಕೀಲ ಅಶೋಕ್ ಹಾರನಹಳ್ಳಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2019, 5:46 IST
Last Updated 23 ಜುಲೈ 2019, 5:46 IST
   

ಬೆಂಗಳೂರು:ಅತೃಪ್ತ ಶಾಸಕರ ಪರವಾಗಿ ವಕೀಲ ಅಶೋಕ್‌ ಹಾರನಹಳ್ಳಿಸಭಾಧ್ಯಕ್ಷರನ್ನು ಭೇಟಿಯಾಗಲು ಸಮಯ ಕೋರಿದ್ದರು. ಭೇಟಿಗೆ ಮುಂಜಾನೆ 11ರ ಸಮಯ ನಿಗದಿಪಡಿಸಿದ್ದ ಸ್ಪೀಕರ್ ರಮೇಶ್‌ಕುಮಾರ್ ವಕೀಲರ ಭೇಟಿಗೆ ತೆರಳಿದರು. ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ ಸದನಲ್ಲಿ ಹಾಜರಿಲ್ಲ. ಹೀಗಾಗಿ ಹಿರಿಯ ಸದಸ್ಯಎ.ಟಿ.ರಾಮಸ್ವಾಮಿ ಸಭಾಧ್ಯಕ್ಷರ ಸ್ಥಾನದಲ್ಲಿ ಕುಳಿತು ಸದನ ನಿರ್ವಹಿಸುತ್ತಿದ್ದಾರೆ.

ಇಂದು ವಿಚಾರಣೆಗೆ ಬರಲು ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿದ್ದಅತೃಪ್ತ ಶಾಸಕರು ವಿಚಾರಣೆಗೆ ಹಾಜರಾಗಲು‌ ನಾಲ್ಕು ವಾರ ಅವಕಾಶ ನೀಡುವಂತೆ ಮನವಿ ಮಾಡಿ ವಿಧಾನಸಭಾ ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್‌ ಅವರಿಗೆ ಪತ್ರ ಬರೆದಿದ್ದರು.

ADVERTISEMENT

ಶಾಸಕರನ್ನು ಅನರ್ಹ ಗೊಳಿಸುವ ಪ್ರಕ್ರಿಯೆಗೆ ಕನಿಷ್ಠಏಳು ದಿನ ಅವಕಾಶ ‌ನೀಡಬೇಕು. ನಮಗೆ ನಮ್ಮ ಪಕ್ಷದಿಂದ ‌ನೀಡಿರುವ ದೂರು ಹಾಗೂ ಆರೋಪದ ದಾಖಲೆಗಳು ದೊರೆತಿಲ್ಲ. ನಾವು ಅನಿವಾರ್ಯ ಕಾರಣದಿಂದ ಬೇರೆಡೆ ಇದ್ದು, ವಿಚಾರಣೆಗೆ ಕಾಲಾವಕಾಶ‌ ನೀಡಬೇಕು ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದರು.

ರಾಜಕಾರಣದ ತಾಜಾ ಅಪ್‌ಡೇಟ್ಸ್‌ಗೆhttp://bit.ly/2yf5kaxಲಿಂಕ್ ಕ್ಲಿಕ್ ಮಾಡಿ

ಅತೃಪ್ತ ಶಾಸಕರ ಪರ ಸಭಾಧ್ಯಕ್ಷರನ್ನು ಭೇಟಿಯಾದ ವಕೀಲ ಅಶೋಕ್ ಹಾರನಹಳ್ಳಿ, ನಿಯಮಗಳ ಅನ್ವಯ ನನ್ನ ಕಕ್ಷಿದಾರರಿಗೆ ನೋಟಿಸ್ ನೀಡಿಲ್ಲಎಂದು ವಾದಿಸಿದರು ಎಂದು ಮೂಲಗಳು ಹೇಳಿವೆ.

‘ಪ್ರಜಾವಾಣಿ’ ಸುದ್ದಿ, ಬರಹಗಳಲ್ಲಿ ರಾಜಕೀಯ ಬೆಳವಣಿಗೆಗಳ ಸಮಗ್ರ ನೋಟ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.