ಬೆಳಗಾವಿ: ‘ಬಿಜೆಪಿ ಪಕ್ಷವು ಟಿಕೆಟ್ ನಿರಾಕರಿಸಿದ್ದಿರಂದ ಕಾಂಗ್ರೆಸ್‌ಗೆ ಹೋಗಿರುವ ಭರಮಗೌಡ (ರಾಜು) ಕಾಗೆ ಅವರನ್ನು ಮತ್ತೆ ಕರೆತರುತ್ತೇನೆ’ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಶನಿವಾರ ಕಾಗವಾಡದಲ್ಲಿ ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದೆ.
ಕಾಗವಾಡದ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಕಾಗೆ ಅವರ ಉಪಸ್ಥಿತಿಯಲ್ಲೇ ಸವದಿ ಆಹ್ವಾನ ನೀಡಿದ್ದಾರೆ.
‘ನಾವಿಬ್ಬರೂ ಜೋಡೆತ್ತುಗಳಿದ್ದಂತೆ. ಜೋಡೆತ್ತುಗಳು ಅಗಲಬಾರದು. ಮೂರೂವರೆ ವರ್ಷಗಳ ಬಳಿಕ ನಿನಗೊಂದು ಬೇರೆ ಜಾಗ ಹುಡುಕುತ್ತೇನೆ. ಆಗ ಮತ್ತೆ ಪಕ್ಷಕ್ಕೆ ಮರಳಿ ಕರೆದುಕೊಂಡು ಬರುತ್ತೇನೆ. ಅಲ್ಲೀವರೆಗೆ ಕಾಗವಾಡದಲ್ಲಿ ಶ್ರೀಮಂತ ಪಾಟೀಲ ಕಾಗವಾಡ ಹಾಗೂ ಅಥಣಿಯಲ್ಲಿ ಮಹೇಶ ಕುಮಠಳ್ಳಿ ಶಾಸಕರಾಗಿರುತ್ತಾರೆ’ ಎಂದಿದ್ದಾರೆ.
‘ರಾಜಕೀಯವಾಗಿ ವಿರೋಧ ಮಾಡಿದೆನೆಂದು, ನನಗೆ ಡಿಸಿಸಿ ಬ್ಯಾಂಕ್‌ನಲ್ಲಿ ನೀನು ವಿರೋಧ ಮಾಡಬೇಡ. ಶಾಪ ಹಾಕಬೇಡ. ನೀನು ವಿರೋಧ ಪಕ್ಷಕ್ಕೆ ಹೋಗಿದ್ದಕ್ಕಾಗಿ ನಾನು ವಿರುದ್ಧವಾಗಿ ಕೆಲಸ ಮಾಡಿದ್ದೇನೆ. ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಬೇಡ. ಮೂರೂವರೆ ವರ್ಷಗಳ ನಂತರ ನಿನ್ನನ್ನು ಎಳೆದು ತಂದು ಯಾವುದಾರೊಂದು ಸ್ಥಾನದ ವ್ಯವಸ್ಥೆ ಮಾಡುತ್ತೇನೆ’ ಎಂದು ಹೇಳಿದ್ದಾರೆ.
ಇದೆಲ್ಲದಕ್ಕೂ ಕಾಗೆ ಮುಗುಳ್ನಗುವಿನ ಮೂಲಕವೇ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.