ಕಲಬುರಗಿ: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಆರೋಪದಲ್ಲಿ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸುನಿಲ್ ವಲ್ಲ್ಯಾಪುರ ಅವರ ಮನೆಯ ಮೇಲೆ ಸಿಐಡಿ ಅಧಿಕಾರಿಗಳ ತಂಡ ಶನಿವಾರ ದಾಳಿ ನಡೆಸಿದೆ.
2022ರಲ್ಲಿ ಸುನಿಲ್ ವಲ್ಲ್ಯಾಪುರ ಅವರ ಪುತ್ರ ವಿನಯ್ ವಲ್ಲ್ಯಾಪುರ ಅವರ ಮೇಲೆ ಭೋವಿ ನಿಗಮದ ₹12 ಕೋಟಿ ದುರ್ಬಳಕೆ ಮಾಡಿಕೊಂಡ ಆರೋಪ ಇದೆ. ನ್ಯಾಯಾಲಯದ ಸರ್ಚ್ ವಾರೆಂಟ್‌ನೊಂದಿಗೆ ಬಂದ ಸಿಐಡಿ ಅಧಿಕಾರಿಗಳ ತಂಡ, ನಗರದ ಸಂತೋಷ ಕಾಲೊನಿಯಲ್ಲಿನ ವಾಲ್ಲ್ಯಾಪುರ ಅವರ ಮನೆಯಲ್ಲಿ ಕಡತಗಳ ಶೋಧ ನಡೆಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.