ಬೆಂಗಳೂರು: ವಕ್ಫ್ ವಿಚಾರವು ಜೀವನ್ಮರಣದ ಪ್ರಶ್ನೆಯನ್ನು ಸೃಷ್ಟಿಸಿದೆ. ಅದರ ವಿರುದ್ಧ ಯಾರೇ ಹೋರಾಟ ಮಾಡಿದರೂ ನಮ್ಮ ಬೆಂಬಲ ಇದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಅವರು ಮಾತನಾಡಿ, 'ವಕ್ಫ್ ವಿಚಾರದಲ್ಲಿ ಬಿಜೆಪಿಯಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ' ಎಂದು ಅಭಿಪ್ರಾಯ ಪಟ್ಟರು.
'ವಿಜಯಪುರದಲ್ಲಿ 16 ಸಾವಿರ ಎಕರೆ ಜಮೀನು ಅನ್ನು ವಕ್ಫ್ ಅಸ್ತಿ ಎಂದಿದೆ. ಜಮೀರ್ ಕೃಪಾಕಟಾಕ್ಷದಿಂದ ದಿನೇ ದಿನೇ ಜಾಸ್ತಿ ಆಗುತ್ತಿದೆ. ಈ ಜಮೀನು ರೈತರು, ಮಠ, ದೇವಸ್ಥಾನಗಳಿಗೆ ಸೇರಿದ್ದು' ಎಂದು ತಿಳಿಸಿದರು.
'ಚಾಲುಕ್ಯರು, ಹೊಯ್ಸಳರು ಕಟ್ಟಿರುವ ದೇವಸ್ಥಾನಗಳೆಲ್ಲ ಇವತ್ತು ವಕ್ಫ್ ಆಸ್ತಿ ಆಗಿದೆ. ವಕ್ಫ್ ಕಾನೂನು 1954ರಲ್ಲಿ ಬಂದಿದೆ. ಸಾವಿರಾರು ವರ್ಷಗಳ ಹಿಂದಿನ ದೇವಸ್ಥಾನಗಳು ವಕ್ಫ್ ಹೆಸರಲ್ಲಿ ಬರ್ತಿದೆ ಅಂದ್ರೆ ಯಾವ ರೀತಿಯಲ್ಲಿ ಕುತಂತ್ರ ನಡೆಯುತ್ತಿದೆ ಎಂದು ಅರ್ಥ ಮಾಡಿಕೊಳ್ಳಬೇಕು' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.