ADVERTISEMENT

ಮುಳಬಾಗಿಲು | ಬೆಲೆ ಕುಸಿತ, ಗೊಬ್ಬರವಾದ ಸೀಬೆಹಣ್ಣು

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2020, 21:13 IST
Last Updated 26 ಏಪ್ರಿಲ್ 2020, 21:13 IST
ಸೀಬೆ ಮರದ ಕೊಂಬೆಗಳನ್ನು ಜಮೀನಿನಲ್ಲಿ ಹರಡಿ ಉಳುಮೆ ಮಾಡಿರುವುದು
ಸೀಬೆ ಮರದ ಕೊಂಬೆಗಳನ್ನು ಜಮೀನಿನಲ್ಲಿ ಹರಡಿ ಉಳುಮೆ ಮಾಡಿರುವುದು   

ನಂಗಲಿ (ಮುಳಬಾಗಿಲು): ಬೆಲೆ ಕುಸಿತ ಹಾಗೂ ಮಾರುಕಟ್ಟೆ ಇಲ್ಲದ ಕಾರಣ ಕೋಲಾರ ಜಿಲ್ಲೆ ಗಡ್ಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎನ್.ಚೌಡೇನಹಳ್ಳಿಯ ರೈತ ಓಬಳರೆಡ್ಡಿ, 4.5 ಎಕರೆಯಲ್ಲಿ ಬೆಳೆದಿದ್ದ ಸೀಬೆಹಣ್ಣನ್ನು ಗೊಬ್ಬರವಾಗಿ ಪರಿವರ್ತಿಸಿದ್ದಾರೆ.

ಹಣ್ಣು, ಕಾಯಿ ಸಮೇತ ಕೊಂಬೆಗಳನ್ನು ಕತ್ತರಿಸಿ ಇಡೀ ಜಮೀನಿಗೆ ಹರಡಿದ್ದಾರೆ. ನಂತರ ಟ್ರಾಕ್ಟರ್‌ನಿಂದ ಉಳುಮೆ ಮಾಡಿಸಿದ್ದಾರೆ.

‘780 ಗಿಡಗಳಿವೆ. ಲಾಕ್‌ಡೌನ್‌ಗೂ ಮುನ್ನ 15ರಿಂದ 20 ಕೆ.ಜಿಯ ಒಂದು ಬಾಕ್ಸ್ ಸೀಬೆ ಹಣ್ಣಿನ ಬೆಲೆ ಮಾರುಕಟ್ಟೆಯಲ್ಲಿ ₹ 700 ಇತ್ತು. ನಂತರ ₹ 200ಕ್ಕೆ ಇಳಿಯಿತು. ಈಗ ಹಣ್ಣು ಖರೀದಿಗೆ ವ್ಯಾಪಾರಿಗಳೇ ಬರುತ್ತಿಲ್ಲ’ ಎಂದು ಓಬಳರೆಡ್ಡಿ ಬೇಸರ ವ್ಯಕ್ತಪಡಿಸಿದರು.

ADVERTISEMENT

ಮೊದಲು ಸಣ್ಣ, ಪುಟ್ಟ ವ್ಯಾಪಾರಿಗಳು ಹಣ್ಣು ಖರೀದಿಸುತ್ತಿದ್ದರು. ಲಾಕ್‌ಡೌನ್ ನಂತರ ಸೀಬೆಯನ್ನು ಕೇಳುವವರಿಲ್ಲ ಎಂದರು.

‘ಸೀಬೆ ಹಣ್ಣು ತಿನ್ನುವವರು ಸ್ಥಳೀಯವಾಗಿ ಕಡಿಮೆ. ಜ್ಯೂಸ್ ತಯಾರಿಕೆ ಕಂಪನಿಗಳಿಗೆ ಹೋಗಲಿದೆ. ರೈತರು ಒಪ್ಪಿದರೆ ಕೆ.ಜಿ ಸೀಬೆಯನ್ನು ₹ 7.50ಕ್ಕೆ ಖರೀದಿಸುತ್ತೇವೆ’ ಎಂದು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಮಂಜನ್ ಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.