ADVERTISEMENT

ಹಿರಿಯ ನಟ ಲೋಕನಾಥ್ ನಿಧನ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2018, 10:49 IST
Last Updated 31 ಡಿಸೆಂಬರ್ 2018, 10:49 IST
   

ಬೆಂಗಳೂರು:ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ (90) ಇಂದು ಮುಂಜಾನೆ ಹೃದಯಾಘಾತದಿಂದನಿಧನರಾದರು.

ನಾಲ್ವರು ಹೆಣ್ಣುಮಕ್ಕಳು ಮತ್ತು ಓರ್ವ ಗಂಡು ಮಗ ಇದ್ದಾರೆ. ಮಧ್ಯಾಹ್ನ 12ರಿಂದ2.30ರವರೆಗೂ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಆಗಸ್ಟ್ 14, 1927ರಂದು ಜನಿಸಿದ್ದ ಲೋಕನಾಥ್ 1000ಕ್ಕೂ ಹೆಚ್ಚು ನಾಟಕಗಳು ಮತ್ತು 650ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ‘ಸಂಸ್ಕಾರ’ ಅವರ ಮೊದಲ ಸಿನಿಮಾ. ‘ಭೂತಯ್ಯನ ಮಗ ಅಯ್ಯು’ ಚಿತ್ರದಲ್ಲಿ ಉಪ್ಪಿನಕಾಯಿ ತಿನ್ನುವ ದೃಶ್ಯ ಅವರಿಗೆ ಜನಪ್ರಿಯತೆ ತಂದುಕೊಟ್ಟಿತು. ಅವರನ್ನು ಜನರು ‘ಉಪ್ಪಿನಕಾಯಿ’ ಎಂದೇ ಪ್ರೀತಿಯಿಂದ ಕರೆಯುತ್ತಿದ್ದರು.

ADVERTISEMENT

ಲೋಕನಾಥ್ ನೆನಪು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.