ADVERTISEMENT

ಲೋಕಾಯುಕ್ತ ದಾಳಿ: ಹತ್ತಾರು ಎಕರೆ ಜಮೀನು, ಕೋಟಿ ಮೌಲ್ಯದ ಚಿನ್ನಾಭರಣ ಪತ್ತೆ

ಲೋಕಾಯುಕ್ತ ದಾಳಿಯಲ್ಲಿ ಪತ್ತೆಯಾದ ಆಸ್ತಿಗಳ ವಿವರ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 20:25 IST
Last Updated 21 ನವೆಂಬರ್ 2024, 20:25 IST
ಕೃಷ್ಣವೇಣಿ ಅವರು ಯಲಹಂಕದಲ್ಲಿ ನಿರ್ಮಿಸುತ್ತಿರುವ ವಾಣಿಜ್ಯ ಸಂಕೀರ್ಣ
ಕೃಷ್ಣವೇಣಿ ಅವರು ಯಲಹಂಕದಲ್ಲಿ ನಿರ್ಮಿಸುತ್ತಿರುವ ವಾಣಿಜ್ಯ ಸಂಕೀರ್ಣ   

ಬೆಂಗಳೂರು: ಆದಾಯ ಮೀರಿದ ಆಸ್ತಿ ಸಂಪಾದಿಸಿದ ಆರೋಪದ ಮೇಲೆ, ನಾಲ್ವರು ಅಧಿಕಾರಿಗಳಿಗೆ ಸೇರಿದ ವಿವಿಧ ಕಟ್ಟಡ, ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಅಪಾರ ಪ್ರಮಾಣದ ಆಸ್ತಿ ಪತ್ತೆ ಮಾಡಿದ್ದಾರೆ.

ಅದರ ವಿವರ ಇಲ್ಲಿದೆ.

₹11.93 ಕೋಟಿ ಆಸ್ತಿಯ ಭೂವಿಜ್ಞಾನಿ

ಎಂ.ಸಿ. ಕೃಷ್ಣವೇಣಿ, ಹಿರಿಯ ಭೂವಿಜ್ಞಾನಿ, ಮಂಗಳೂರು

* 26 ಎಕರೆ ಕಾಫಿ ಪ್ಲಾಂಟೇಷನ್‌, ಬೆಂಗಳೂರಿನ ಯಲಹಂಕದಲ್ಲಿ ಒಂದು ಫ್ಲಾಟ್ ಹಾಗೂ ನಿರ್ಮಾಣ ಹಂತದ ಒಂದು ವಾಣಿಜ್ಯ ಸಂಕೀರ್ಣ. ₹10.41 ಕೋಟಿ ಮೌಲ್ಯದ ಸ್ಥಿರಾಸ್ತಿ

ADVERTISEMENT

* ₹66 ಲಕ್ಷದ ಚಿನ್ನಾಭರಣ, ₹60 ಲಕ್ಷ ಮೌಲ್ಯದ ವಾಹನಗಳು, ₹24.40 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು, ₹56,450 ನಗದು

₹11.93 ಕೋಟಿ ಆಸ್ತಿಯ ಒಟ್ಟು ಮೌಲ್ಯ

ಮಹೇಶ್ ಅವರ ಭಂಗಲೆ
ಕೃಷ್ಣವೇಣಿ ಅವರ ಚಿಕ್ಕಬಳ್ಳಾಪುರ ಮನೆಯಲ್ಲಿ ಪತ್ತೆಯಾದ ಚಿನ್ನಾಭರಣಗಳು ಮತ್ತು ಬೆಳ್ಳಿಯ ವಸ್ತುಗಳು

ನೀರಾವರಿ ಅಧಿಕಾರಿ ಬಳಿ 25 ಎಕರೆ

ಮಹೇಶ್‌ ವ್ಯವಸ್ಥಾಪಕ ನಿರ್ದೇಶಕ ಕಾವೇರಿ ನೀರಾವರಿ ನಿಗಮ ಮಂಡ್ಯ

* 25 ಎಕರೆ ಕೃಷಿ ಭೂಮಿ 25 ನಿವೇಶನಗಳು ಒಂದು ಬಂಗಲೆ ಸೇರಿ ಒಟ್ಟು ಸ್ಥಿರಾಸ್ತಿ ಮೌಲ್ಯ ₹4.76 ಕೋಟಿ

* ₹1.82 ಲಕ್ಷ ನಗದು ₹15 ಲಕ್ಷದ ಚಿನ್ನಾಭರಣ ₹25 ಲಕ್ಷ ಮೌಲ್ಯದ ವಾಹನಗಳು

* ಐಷಾರಾಮಿ ಗೃಹೋಪಯೋಗಿ ವಸ್ತುಗಳ ಮೌಲ್ಯ ಬರೋಬ್ಬರಿ ₹1.71 ಕೋಟಿ ₹6.89 ಕೋಟಿಆಸ್ತಿಯ ಒಟ್ಟು ಮೌಲ್ಯ

ಅಪಾರ ಪ್ರಮಾಣದ ಚಿನ್ನ

ಎನ್‌.ಕೆ.ತಿಪ್ಪೇಸ್ವಾಮಿ ನಿರ್ದೇಶಕ ನಗರ ಯೋಜನೆ ಬೆಂಗಳೂರು

* ₹2.50 ಕೋಟಿ ಮೌಲ್ಯದ 2 ಬಂಗಲೆ 1 ನಿವೇಶನ ಮತ್ತು 7 ಎಕರೆ 20 ಗುಂಟೆ ಕೃಷಿ ಜಮೀನು

* ₹58.73 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳು ದುಬಾರಿ ಕೈಗಡಿಯಾರಗಳು. ಎಂಟು ಉಂಗುರಗಳು 10 ಚಿನ್ನದ ಸರಗಳು

* ₹29 ಲಕ್ಷ ಮೌಲ್ಯದ ವಾಹನಗಳು ₹8 ಲಕ್ಷ ನಗದು ₹15000 ಮೌಲ್ಯದ ಇತರ ವಸ್ತುಗಳು ₹3.46 ಕೋಟಿಆಸ್ತಿಯ ಒಟ್ಟು ಮೌಲ್ಯ

ಅಬಕಾರಿ ಅಧಿಕಾರಿಯ ಬಹುಹೂಡಿಕೆ

ಮೋಹನ್‌ ಕೆ. ಅಬಕಾರಿ ಸೂಪರಿಂಟೆಂಡೆಂಟ್  ಜಂಟಿ ಆಯುಕ್ತರ ಕಚೇರಿ ಬೆಂಗಳೂರು ದಕ್ಷಿಣ

* ₹3.22 ಕೋಟಿ ಮೌಲ್ಯದ 2 ವಾಸದ ಮನೆಗಳು 3 ನಿವೇಶನಗಳು 2 ಎಕರೆ 25 ಗುಂಟೆ ಕೃಷಿ ಜಮೀನು * ₹44.58 ಲಕ್ಷದ ಚಿನ್ನಾಭರಣ ₹35 ಲಕ್ಷದ ವಾಹನಗಳು ₹35 ಲಕ್ಷದ ನಿಶ್ಚಿತ ಠೇವಣಿ ₹4.37 ಕೋಟಿಆಸ್ತಿಯ ಒಟ್ಟು ಮೌಲ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.