ಬೆಂಗಳೂರು ಕೇಂದ್ರ
ಬೆಂಗಳೂರು ಕೇಂದ್ರದ ಪಾರುಪತ್ಯಕ್ಕೆ ಉಭಯ ಪಕ್ಷಗಳ ಮಧ್ಯೆ ಪೈಪೋಟಿ ಆರಂಭವಾಗಿದೆ.
2008ರಲ್ಲಿ ಕ್ಷೇತ್ರ ಮರುವಿಂಗಡಣೆ ಬಳಿಕ ಬೆಂಗಳೂರು ದಕ್ಷಿಣ, ಉತ್ತರ ಕ್ಷೇತ್ರದಲ್ಲಿದ್ದ ಕೆಲವು ಕ್ಷೇತ್ರಗಳನ್ನು ಒಳಗೊಂಡು ಹೊಸ ಕ್ಷೇತ್ರ ಉಗಮವಾಯಿತು. ಹೊಸ ಕ್ಷೇತ್ರದಲ್ಲಿ ಸತತ ಎರಡು ಬಾರಿ ಗೆದ್ದಿರುವ ಬಿಜೆಪಿಯ ಪಿ.ಸಿ. ಮೋಹನ್ ಈ ಬಾರಿಯೂ ಅದೇ ಪಕ್ಷದಿಂದ ಸ್ಪರ್ಧಿಸುವುದು ಖಚಿತ.ಜೆಡಿಎಸ್–ಕಾಂಗ್ರೆಸ್ ಮಧ್ಯೆ ಚುನಾವಣೆ ಹೊಂದಾಣಿಕೆಯಾದರೆ ಕ್ಷೇತ್ರವು ಕಾಂಗ್ರೆಸ್ ಪಾಲಾಗುವುದು ಖಚಿತ. ಇಲ್ಲಿ ಜೆಡಿಎಸ್‌ಗೆ ಹುರಿಯಾಳುಗಳೇ ಇಲ್ಲ.
ಕಲಬುರ್ಗಿ
ಕಾಂಗ್ರೆಸ್ ಹಿಡಿತದಲ್ಲಿರುವ ‘ಗುಲಬರ್ಗಾ’ ಲೋಕಸಭಾ ಕ್ಷೇತ್ರದ ಮೇಲೆ ಪಾರುಪತ್ಯ ಸಾಧಿಸಲು ಬಿಜೆಪಿ ತೀವ್ರ ಕಸರತ್ತು ಆರಂಭಿಸಿದೆ.
2008ರಲ್ಲಿ ಕ್ಷೇತ್ರ ಮರುವಿಂಗಡಣೆ ಬಳಿಕ ಇದು ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಒಂಬತ್ತು ಬಾರಿ ಶಾಸಕ, ಎರಡು ಬಾರಿ ಸಂಸದರಾದ ಮಲ್ಲಿಕಾರ್ಜುನ ಖರ್ಗೆ 12ನೇ ಚುನಾವಣೆಗೆ ಅಣಿಯಾಗಿದ್ದಾರೆ. ಹಿಂದಿನ ಎರಡು ಚುನಾವಣೆಯಲ್ಲಿ ಬಿಜೆಪಿಯಿಂದ ರೇವೂನಾಯಕ ಬೆಳಮಗಿ ಸ್ಪರ್ಧಿಸಿದ್ದರು. ಅವರೀಗ ಜೆಡಿಎಸ್ ಸೇರಿದ್ದಾರೆ. ಡಾ.ಉಮೇಶ ಜಾಧವ ಅವರನ್ನು ಕರೆತಂದು ಲೋಕಸಭೆ ಚುನಾವಣೆಯ ಕಣಕ್ಕಿಳಿಸುವ ಚಿಂತನೆ ಬಿಜೆಪಿಯಲ್ಲಿದೆ.
ಬೆಳಗಾವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.