ಶ್ರೀರಾಮ, ತನ್ನ ತಮ್ಮ ಲಕ್ಷ್ಮಣನೊಂದಿಗೆ ಲಂಕೆಗೆ ಹೋಗುವ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲೆಯ ಗಡಿಭಾಗ ತಮಿಳುನಾಡಿನ ತಾಳವಾಡಿಯ ಮೂಲಕ ಸಾಗಿದ್ದ ಎಂಬ ನಂಬಿಕೆ ಭಕ್ತರಲ್ಲಿದೆ. ಇದರ ಐತಿಹ್ಯವಾಗಿ ತಾಳವಾಡಿ ತಾಲ್ಲೂಕಿನ ದೊಡ್ಡಪುರ ಗ್ರಾಮದ ಬಳಿ ರಾಮರಪಾದ ಎಂಬ ಸ್ಥಳವಿದೆ. ಅಲ್ಲಿ ಪುಟ್ಟ ರಾಮನ ದೇವಾಲಯವಿದ್ದು ಭಕ್ತರನ್ನು ಸೆಳೆಯುತ್ತಿದೆ. ದೇವಾಲಯವು ಸಂರಕ್ಷಿತ ಅರಣ್ಯ ಪ್ರದೇಶದಲ್ಲಿದ್ದು, ನಿರ್ಬಂಧಿತ ಸ್ಥಳವಾಗಿದೆ. ಹಾಗಾಗಿ ಶನಿವಾರ ಮತ್ತು ವಿಶೇಷ ದಿನಗಳಲ್ಲಿ ಮಾತ್ರ ಭಕ್ತರಿಗೆ ಅವಕಾಶ. ಉಳಿದ ದಿನ ಬಂದರೆ ದಂಡ ತೆರಬೇಕಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.