ನರಗುಂದ (ಗದಗ ಜಿಲ್ಲೆ): ಪ್ರೀತಿಸಿ ಮದುವೆಯಾದ ಒಂದೇ ಜಾತಿಯ ಯುವಕ, ಯುವತಿ 14 ವರ್ಷಗಳ ನಂತರ ಗ್ರಾಮಕ್ಕೆ ಬಂದಿದ್ದು, ಅವರ ಕುಟುಂಬವನ್ನು ಅದೇ ಜಾತಿಯವರು ಬಹಿಷ್ಕರಿಸಿದ ಪ್ರಕರಣ ತಾಲ್ಲೂಕಿನ ಸುರಕೋಡದಲ್ಲಿ ನಡೆದಿದೆ.
ಶೋಭಾ ಮತ್ತು ಶಿವಾನಂದ ಅವರ ಕುಟುಂಬ ಬಹಿಷ್ಕಾರಕ್ಕೊಳಗಾಗಿದೆ.
‘ಶೋಭಾ ಮನೆಯವರು ಕೆಲವರೊಂದಿಗೆ ಬಂದು ಶಿವಾನಂದ ಸುರಕೋಡ (ಮಾದರ) ಅವರ ತಂದೆ ಸಾಬಣ್ಣನವರ ಮನೆಗೆ ಕೀಲಿ ಹಾಕಿ ಕುಟುಂಬವನ್ನು ಹೊರಹಾಕಿದ್ದಾರೆ. ನಮ್ಮ ಜನಾಂಗದವರ ಜೊತೆ ನಾವು ಯಾರಾದರೂ ಮಾತನಾಡಿದರೆ ₹1 ಸಾವಿರ ದಂಡ ಹಾಗೂ ಬಹಿಷ್ಕಾರ ಹಾಕುವುದಾಗಿ ಎಚ್ಚರಿಸಿದ್ದಾರೆ’ ಎಂದು ಶಿವಾನಂದ ಅವರ ಸಹೋದರ ಮುತ್ತು ಸುರಕೋಡ ಭಾನುವಾರ ತಿಳಿಸಿದರು.
‘ಸುರಕೋಡ ಗ್ರಾಮಕ್ಕೆ ಶನಿವಾರ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಬಹಿಷ್ಕಾರ ಹಾಕಿರುವುದನ್ನು ಪರಿಶೀಲಿಸಲಾಗಿದೆ. ಕುಟುಂಬಕ್ಕೆ ಪ್ರತ್ಯೇಕ ನಿವೇಶನ ನೀಡಲು ಸ್ಥಳ ಗುರುತಿಸಲಾಗಿದೆ’ ಎಂದು ತಹಶೀಲ್ದಾರ್ ಎ.ಡಿ. ಅಮರವಾದಗಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.