ADVERTISEMENT

ಕೆಲವರು ದ್ವೇಷದ ವಿಷವನ್ನೇ ಉಸಿರಾಡುತ್ತಿದ್ದಾರೆ: ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2022, 17:20 IST
Last Updated 30 ಮಾರ್ಚ್ 2022, 17:20 IST
ಎಚ್.ಸಿ. ಮಹದೇವಪ್ಪ
ಎಚ್.ಸಿ. ಮಹದೇವಪ್ಪ   

ಬೆಂಗಳೂರು: ಕೆಲವು ಮನುಷ್ಯ ವಿರೋಧಿಗಳು ರಾಜ್ಯದಲ್ಲಿ ದ್ವೇಷದ ವಿಷವನ್ನೇ ಉಸಿರಾಡುತ್ತಿದ್ದು ಅವರು ಮಾನಸಿಕ ಸ್ಥಿಮಿತರಾಗಿ ಉಳಿಯುವ ಲಕ್ಷಣ ಕಾಣುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ಎಚ್‌.ಸಿ. ಮಹದೇವಪ್ಪ ಹೇಳಿದ್ದಾರೆ.

ಡಾ. ಅಂಬೇಡ್ಕರ್ ನೀಡಿರುವ ಸಂವಿಧಾನ ಹಾಗೂ ಅದನ್ನು ಆಧರಿಸಿದ ಪ್ರಜಾಪ್ರಭುತ್ವವು ದೇಶದ ಆಮ್ಲಜನಕವಾಗಿದೆ. ಆದರೆ, ಅದನ್ನು ಒಪ್ಪದ ಕೆಲವರು ಅನಗತ್ಯ ವಿವಾದ ಸೃಷ್ಟಿಮಾಡುತ್ತಿದ್ದಾರೆ.ಒಳ್ಳೆಯತನ ಇದ್ದರೆ ಕುಂಕುಮವಾಗಲಿ, ಹಿಜಾಬ್, ಹಲಾಲ್ ಆಗಲಿ ಯಾವುದೂ ಸಮಸ್ಯೆಗಳಲ್ಲ ಎಂದರು.

‘ಮೌಢ್ಯ ರಹಿತವಾದ ವೈಜ್ಞಾ ನಿಕ ಆಚರಣೆಗಳನ್ನು ಎಲ್ಲ ಧರ್ಮದವರೂ ಗೌರವಿ ಸಬೇಕು. ಇಷ್ಟವಿದ್ದರೆ ಭಾಗಿಯಾ ಗಬೇಕು.ಮನುಷ್ಯನ ಹಸಿವಿನ ಮುಂದೆ ಯಾವ ಧರ್ಮವೂ ನಿಲ್ಲಲಾರದು. ಇದುವೆ ಸಂವಿಧಾ‌ನ ನಮಗೆ ಹೇಳಿದ ತಿಳಿವಳಿಕೆ’ ಎಂದು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.