ಶ್ರವಣಬೆಳಗೊಳ: ವೈರಾಗ್ಯಮೂರ್ತಿ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕದ ವಿಸರ್ಜನೆಯ ಧಾರ್ಮಿಕ ವಿಧಿಗಳು ಶುಕ್ರವಾರ ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಸಂಪನ್ನಗೊಂಡವು.
ಮೂರ್ತಿಗೆ ಪಂಚಾಮೃತ ಅಭಿಷೇಕಗಳಾದ ಎಳನೀರು, ಈಕ್ಷುರಸ, ಕ್ಷೀರ, ಕಲ್ಕಚೂರ್ಣ, ಅರಿಸಿನ, ಕಷಾಯ, ಶ್ರೀಗಂಧ, ಮಲಯಾದ್ರಿ ಚಂದನ, ಕೇಸರಿ, ಚಂದನ, ಅಷ್ಟಗಂಧ, ಪುಷ್ಪವೃಷ್ಟಿ ನೆರವೇರಿಸಲಾಯಿತು. ಜೊತೆಗೆ ಪ್ರತಿಷ್ಠಾಪಿಸಲ್ಪಟ್ಟಿದ್ದ 24 ತೀರ್ಥಂಕರರಿಗೂ ಏಕ ಕಾಲದಲ್ಲಿ ಅಭಿಷೇಕ ನಡೆಯಿತು.
ಸಾನಿಧ್ಯ ವಹಿಸಿದ್ದ ಆಚಾರ್ಯ ವರ್ಧಮಾನ ಸಾಗರ ಮಹಾರಾಜರು, ‘ಲೋಕ ಕಲ್ಯಾಣಾರ್ಥ ಆಯೋಜಿಸಿದ್ದ ಮಹಾಮಸ್ತಕಾಭಿಷೇಕ ಯಶಸ್ವಿಯಾಗಿ ನಡೆಯಿತು’ ಎಂದರು.
ಇದರೊಂದಿಗೆ 7 ತಿಂಗಳಿಂದ ನಡೆದ 21ನೇ ಶತಮಾನದ ದ್ವಿತೀಯ ಮಹಾಮಸ್ತಕಾಭಿಷೇಕಕ್ಕೆ ತೆರೆಬಿತ್ತು. ಮುಂದಿನ ಮಹಾಮಸ್ತಕಾಭಿಷೇಕ 2030ಕ್ಕೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.