ADVERTISEMENT

ಸುಮಲತಾ ಮಂಡ್ಯ ಗೌಡ್ತಿ ಅಲ್ಲ, ನಾಯ್ಡು: ಶಿವರಾಮೇಗೌಡ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2019, 20:20 IST
Last Updated 31 ಮಾರ್ಚ್ 2019, 20:20 IST

ಮಂಡ್ಯ: ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರು ಸುಮಲತಾ ಮೂಲ ಕೆಣಕಿ ವಿವಾದ ಮೈಮೇಲೆ ಎಳೆದುಕೊಂಡ ಬೆನ್ನಲ್ಲೇ ಸಂಸದ ಶಿವರಾಮೇಗೌಡ ಭಾನುವಾರ ರಾತ್ರಿ ಸುಮಲತಾ ಜಾತಿ ಹುಡುಕಲು ಯತ್ನಿಸಿದ್ದಾರೆ.

ನಾಗಮಂಗಲ ತಾಲ್ಲೂಕು ಮಲ್ಲೇನಹಳ್ಳಿ ಗ್ರಾಮದಲ್ಲಿ ನಡೆದ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ‘ಸುಮಲತಾ ಮಳವಳ್ಳಿ ಹುಚ್ಚೇಗೌಡರ ಸೊಸೆ ಎನ್ನುವುದರಲ್ಲಿ ಅರ್ಥವಿಲ್ಲ. ಅವರು ನಾಯ್ದು ಜನಾಂಗದವರು, ಮಂಡ್ಯ ಗೌಡ್ತಿ ಅಲ್ಲ’ ಎಂದು ನಾಲಗೆ ಹರಿಬಿಟ್ಟಿದ್ದಾರೆ.

ಕಳೆದ ಲೋಕಸಭೆ ಉಪ ಚುನಾವಣೆ ವೇಳೆ ಅಂಬರೀಷ್‌ ಕಾಲಿಗೆ ಬಿದ್ದು ಬೆಂಬಲ ಕೋರಿದ್ದ ಅವರು ಈಗ ಅಂಬಿ ವಿರುದ್ಧವೇ ಹೇಳಿಕೆ ಕೊಟ್ಟಿದ್ದಾರೆ.

ADVERTISEMENT

‘ಅಂಬರೀಷ್‌ ಅವರನ್ನು ಹಣ ಕೊಟ್ಟು ರಾಜಕಾರಣಕ್ಕೆ ಕರೆದುಕೊಂಡು ಬಂದಿದ್ದೇ ನಾನು. ಇನ್ನೂ ಕಣ್ಣು ಬಿಡದ ಅಂಬರೀಷ್‌ ಮಗ ಅಭಿಷೇಕ್‌ ಅಪ್ಪನಂತೆಯೇ ಮಾತನಾಡುತ್ತಿದ್ದಾನೆ. ಅಂಬರೀಷ್‌ ಮೃತದೇಹವನ್ನು ಮಂಡ್ಯಕ್ಕೆ ತಂದಾಗ ಸೇರಿದ್ದ ಜನಸಾಗರವನ್ನು ಕಂಡು ಸುಮಲತಾ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.