ADVERTISEMENT

ವಸಾಹತುಶಾಹಿ ಚಿಂತಕರಿಗೆ ದೇಶದ ನಾಡಿಮಿಡಿತ ಅರ್ಥವಾಗದು: ಪ್ರೊ.ಪ್ರಫುಲ್ ಕೇಟ್ಕರ್

ಮಂಗಳೂರು ಲಿಟ್‌ ಫೆಸ್ಟ್‌ ಆರಂಭ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2018, 6:41 IST
Last Updated 3 ನವೆಂಬರ್ 2018, 6:41 IST
ಮಂಗಳೂರಿನಲ್ಲಿ ಶನಿವಾರ ಆರಂಭವಾದ ‘ಮಂಗಳೂರು ಲಿಟ್ ಫ಼ೆಸ್ಟ್’ನಲ್ಲಿ ‘ಆರ್ಗನೈಸರ್’ ಪತ್ರಿಕೆಯ ಸಂಪಾದಕ ಪ್ರೊ.ಪ್ರಫುಲ್ ಕೇಟ್ಕರ್ ಮಾತನಾಡಿದರು
ಮಂಗಳೂರಿನಲ್ಲಿ ಶನಿವಾರ ಆರಂಭವಾದ ‘ಮಂಗಳೂರು ಲಿಟ್ ಫ಼ೆಸ್ಟ್’ನಲ್ಲಿ ‘ಆರ್ಗನೈಸರ್’ ಪತ್ರಿಕೆಯ ಸಂಪಾದಕ ಪ್ರೊ.ಪ್ರಫುಲ್ ಕೇಟ್ಕರ್ ಮಾತನಾಡಿದರು   

ಮಂಗಳೂರು: ‘ದ ಐಡಿಯಾ ಆಫ಼್ ಭಾರತ್’ ಪರಿಕಲ್ಪನೆಯೊಂದಿಗೆ ಎರಡು ದಿನಗಳ ಕಾಲ ನಡೆಯಲಿರುವ ರಾಷ್ಟ್ರಮಟ್ಟದ ಸಾಹಿತ್ಯ ಉತ್ಸವ ‘ಮಂಗಳೂರು ಲಿಟ್ ಫ಼ೆಸ್ಟ್’ಗೆ ಡಾ.ಟಿ.ಎಂ.ಎ.ಪೈ ಇಂಟರ್‌ನ್ಯಾಷನಲ್ಸೆಂಟರ್‌ನಲ್ಲಿ ಇಂದು ಅಪಾರ ಸಾಹಿತ್ಯಾಸಕ್ತರ ಉಪಸ್ಥಿತಿಯಲ್ಲಿ ಚಾಲನೆ ದೊರೆಯಿತು.

ಉದ್ಘಾಟನೆ ಬಳಿಕ ದಿಕ್ಸೂಚಿ ಭಾಷಣ ಮಾಡಿದ ‘ಆರ್ಗನೈಸರ್’ ಪತ್ರಿಕೆಯ ಸಂಪಾದಕ ಪ್ರೊ.ಪ್ರಫುಲ್ ಕೇಟ್ಕರ್, ‘ಭಾರತವು ವಸಾಹತುಶಾಹಿ ಮಾದರಿಯ ಆಧುನಿಕತೆಯನ್ನುಬದಿಗೆ ಸರಿಸಿ, ಬೌದ್ಧಿಕತೆಯ ತಳಹದಿಯ ಮೇಲೆಹೊಸ ಆಡಳಿತವಿಧಾನ ಮತ್ತು ಚಿಂತನೆಯನ್ನುಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.

ದೇವಸ್ಥಾನಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಗಳನ್ನು ಅರ್ಥಮಾಡಿಕೊಂಡು, ತಳಮಟ್ಟದಲ್ಲಿ ಇರುವ ಮೌಲ್ಯಗಳನ್ನು ಗುರುತಿಸಿ ಭಾರತದ ಪರಿಕಲ್ಪನೆಯನ್ನು ಗ್ರಹಿಸಬೇಕಾಗಿದೆ. ವಸಾಹತುಶಾಹಿಪ್ರಭಾವದ ಆಧಾರದಲ್ಲಿಯೋಚನೆ ಮಾಡುವ ಚಿಂತಕರಿಗೆ ದೇಶದ ದಕ್ಷಿಣ, ಪೂರ್ವ ಮತ್ತು ಈಶಾನ್ಯ ಭೂಭಾಗಗಳ ಸಂಪ್ರದಾಯ, ಸಂಸ್ಕೃತಿಗಳನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಾಗುವುದಿಲ್ಲ.ಆಯಾ ಭೂ ಪ್ರದೇಶಗಳ ಸಾಂಸ್ಕೃತಿಕ ಹಿನ್ನೆಲೆಯನ್ನು ಗ್ರಹಿಸುವ ಮೂಲಕಭಾರತದ ಕಲ್ಪನೆಯನ್ನು ಅರ್ಥಮಾಡಿಕೊಳ್ಳಬೇಕು ಎಂದರು.

ADVERTISEMENT

ಸಹಿಷ್ಣುತೆಯ ಬಗ್ಗೆ ಈಚೆಗೆಭಾರೀ ಚರ್ಚೆ ನಡೆಯುತ್ತದೆ. ಭಾರತೀಯತೆಯಪರಿಕಲ್ಪನೆಯು ಸ್ವೀಕಾರ ಮನೋಭಾವಹೊಂದಿದೆದು. ಕ್ರಿಶ್ಚಿಯನ್, ಫಾರ್ಸಿ, ಮುಸ್ಲಿಂ ಸೇರಿದಂತೆಯಾವುದೇ ಧರ್ಮವನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಿ ಅವರ ಧರ್ಮಾಚರಣೆಗೆ ಅವಕಾಶ ಕಲ್ಪಿಸಿದ ಭಾರತೀಯ ಮನೋಭಾವವನ್ನು ಅರ್ಥ ಮಾಡಿಕೊಳ್ಳಬೇಕು. ಸಹಿಷ್ಣುತೆಗಿಂತಲೂ ಸ್ವೀಕಾರ ಮನೋಭಾವ ಅತ್ಯಂತ ಹಿರಿದು ಎಂದು ಹೇಳಿದರು.

ನಿಟ್ಟೆ ಎಜುಕೇಶನ್ ಟ್ರಸ್ಟ್‌ನಅಧ್ಯಕ್ಷ ಎನ್. ವಿನಯ್ ಹೆಗ್ಡೆ ಮಾತನಾಡಿ ಶಬರಿಮಲೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತಲೆ ಹಾಕುವುದು ಸರಿಯಲ್ಲ. ಸೆಕ್ಯುಲರಿಸಂ ಹೆಸರಿನಲ್ಲಿ ಧರ್ಮಾಚರಣೆಯ ಹಕ್ಕನ್ನು ಕಸಿದುಕೊಳ್ಳುವುದು ಸರಿಯಲ್ಲ. ಇತ್ತೀಚೆಗೆ ನ್ಯಾಯಾಂಗವು ಧರ್ಮದ ಆಚರಣೆಯ ವಿಷಯದಲ್ಲಿ ತಲೆ ಹಾಕುತ್ತಿದೆ. ಇದು ಸರಿಯಲ್ಲ. ರಾಜಕೀಯ ಕೂಡ ಧರ್ಮದ ವಿಚಾರದಲ್ಲಿ ತಲೆ ಹಾಕಬಾರದು ಎಂದರು.

ತುಷಾರ, ತರಂಗ ಮತ್ತು ತುಂತುರು ಪತ್ರಿಕೆಗಳ ವ್ಯವಸ್ಥಾಪಕ ನಿರ್ದೇಶಕಿ ಸಂಧ್ಯಾ ಪೈ ಉದ್ಘಾಟನಾ ಭಾಷಣ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.