ಶಿರಸಿ: ರಾಜ್ಯದಲ್ಲಿ ಬಾಕಿ ಉಳಿದಿರುವ 7.81 ಲಕ್ಷ ಕಾರ್ಮಿಕರ ಖಾತೆಗೆ 15 ದಿನಗಳಲ್ಲಿ, ಸರ್ಕಾರ ನೀಡುವ ಧನಸಹಾಯ ₹ 2000 ಅನ್ನು ಜಮೆ ಮಾಡಲಾಗುವುದು ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಶುಕ್ರವಾರ ಇಲ್ಲಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿರುವ 21.50 ಲಕ್ಷ ಕಾರ್ಮಿಕರಿದ್ದಾರೆ. ಈಗಾಗಲೇ 12.76 ಲಕ್ಷ ಕಾರ್ಮಿಕರ ಬ್ಯಾಂಕ್ ಖಾತೆಗೆ ಹಣ ಜಮೆ ಆಗಿದೆ‘ ಎಂದರು.
’ಸಾಕಷ್ಟು ಕಾರ್ಮಿಕರ ನೋಂದಣಿ ನವೀಕರಣಗೊಂಡಿಲ್ಲ. ಹೀಗಾಗಿ, ಅವರ ಬ್ಯಾಂಕ್ ಖಾತೆ ಸ್ಥಗಿತವಾಗಿದೆ. ಇಂತಹವರು ಪರ್ಯಾಯ ಖಾತೆ ಸಂಖ್ಯೆ ನೀಡಿದ ತಕ್ಷಣದಲ್ಲಿ ಹಣ ಜಮೆ ಮಾಡುವಂತೆ ಸೂಚಿಸಲಾಗಿದೆ. ಈಗಾಗಲೇ ₹ 321 ಕೋಟಿ ನೀಡಲಾಗಿದೆ. ಇನ್ನು ₹ 220 ಕೋಟಿ ಬಾಕಿ ನೀಡಬೇಕಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.