ADVERTISEMENT

ಮಾಸ್ತಿ ಪ್ರಶಸ್ತಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 11 ಜೂನ್ 2019, 17:14 IST
Last Updated 11 ಜೂನ್ 2019, 17:14 IST
ಕೆ.ಮರುಳಸಿದ್ಧಪ್ಪ
ಕೆ.ಮರುಳಸಿದ್ಧಪ್ಪ   

ಬೆಂಗಳೂರು: ‘ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಟ್ರಸ್ಟ್‌’ ನೀಡುವ ‘ಮಾಸ್ತಿ ಪ್ರಶಸ್ತಿ’ ಪ್ರಕಟವಾಗಿದೆ.

ಕೆ.ಮರುಳಸಿದ್ದಪ್ಪ (ವಿಮರ್ಶೆ), ಈಶ್ವರಚಂದ್ರ (ಕಥೆ), ಮೊಗಳ್ಳಿ ಗಣೇಶ್‌ (ಕಥೆ), ಸವಿತಾ ನಾಗಭೂಷಣ (ಕಾವ್ಯ), ಬೊಳುವಾರು ಮಹಮದ್‌ ಕುಂಞ (ಸೃಜನಶೀಲ) ಅವರು 2019ನೇ ಸಾಲಿನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

‘ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇದೇ 29ರಂದು ಬೆಂಗಳೂರಿನ ಭಾರತೀಯ ವಿದ್ಯಾಭವನದ ಸಭಾಂಗಣದಲ್ಲಿ ನಡೆಯಲಿದೆ. ಪುರಸ್ಕೃತರಿಗೆ ಫಲಕ, ₹25 ಸಾವಿರ ಬಹುಮಾನ ನೀಡಲಾಗುವುದು’ ಎಂದು ಟ್ರಸ್ಟ್‌ ಅಧ್ಯಕ್ಷ ಮಾವಿನಕೆರೆ ರಂಗನಾಥನ್ ತಿಳಿಸಿದ್ದಾರೆ.

ADVERTISEMENT

ಮಾವಿನಕೆರೆ ರಂಗನಾಥನ್‌ ಅಧ್ಯಕ್ಷತೆಯ ಆಯ್ಕೆ ಸಮಿತಿಯಲ್ಲಿ ಎಂ.ಎಚ್‌.ಕೃಷ್ಣಯ್ಯ, ಜಿ.ಎನ್‌.ರಂಗನಾಥ್‌ ರಾವ್‌, ಬಿ.ಆರ್‌.ಲಕ್ಷ್ಮಣರಾವ್‌, ಕೃಷ್ಣಮೂರ್ತಿ ಹನೂರು, ಉಮಾ ಕೇಸರಿ, ರವಿಕುಮಾರ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.