ADVERTISEMENT

ಗಲಭೆ ಸಂತ್ರಸ್ತರಿಗೆ ಗರಿಷ್ಠ ₹ 10 ಲಕ್ಷ ಪರಿಹಾರ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2023, 15:46 IST
Last Updated 29 ಸೆಪ್ಟೆಂಬರ್ 2023, 15:46 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಗುಂಪು ಹತ್ಯೆ, ಗಲಭೆಗಳಲ್ಲಿ ಸಂತ್ರಸ್ತರಾದವರಿಗೆ, ಅವರ ಅವಲಂಬಿತ ಕುಟುಂಬ ವರ್ಗಕ್ಕೆ ನೀಡುವ ಪರಿಹಾರ ಮೊತ್ತವನ್ನು ರಾಜ್ಯ ಸರ್ಕಾರ ಹೆಚ್ಚಳ ಮಾಡಿದೆ.

ಗುಂಪು ಹತ್ಯೆಗೆ ಒಳಗಾಗುವ ಸಂತ್ರಸ್ತರ ಕುಟುಂಬಕ್ಕೆ ₹ 5 ಲಕ್ಷದಿಂದ ₹ 10 ಲಕ್ಷ, ಸಂತ್ರಸ್ತರು ಶೇ 80ರಷ್ಟು ಅಂಗವಿಕಲತೆಗೆ ಒಳಗಾಗಿದ್ದರೆ ₹ 2 ಲಕ್ಷದಿಂದ ₹ 5 ಲಕ್ಷ, ಶೇ 40ಕ್ಕೂ ಹೆಚ್ಚು ಅಂಗವಿಕಲತೆಗೆ ಒಳಗಾಗಿದ್ದರೆ ₹ 2 ಲಕ್ಷದಿಂದ ₹ 4 ಲಕ್ಷ, ಶೇ 20ರಷ್ಟು ಆಗಿದ್ದರೆ ₹ 1 ಲಕ್ಷದಿಂದ ₹ 3 ಲಕ್ಷ, ಶೇ 20ಕ್ಕಿಂತ ಕಡಿಮೆ ಇದ್ದರೆ ₹ 1ಲಕ್ಷದಿಂದ ₹ 2 ಲಕ್ಷದವರೆಗೆ ಪರಿಹಾರ ನಿಗದಿ ಮಾಡಲಾಗಿದೆ.

ADVERTISEMENT

ಸುಪ್ರೀಂಕೋರ್ಟ್‌ ನಿರ್ದೇಶನದಂತೆ ರಾಜ್ಯ ಸರ್ಕಾರ ಸಂತ್ರಸ್ತರ ಪರಿಹಾರ ಯೋಜನೆ–2011ಕ್ಕೆ ತಿದ್ದುಪಡಿ ತಂದಿದ್ದು, ಕನಿಷ್ಠ ಮತ್ತು ಗರಿಷ್ಠ ಮೊತ್ತ ನಿಗದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.