ADVERTISEMENT

ಮೀ–ಟೂ:ಮಾನನಷ್ಟ ಮೊಕದ್ದಮೆ ರದ್ದು ಕೋರಿ ಶ್ರುತಿ ಹರಿಹರನ್‌ ಸಲ್ಲಿಸಿದ್ದ ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2019, 13:32 IST
Last Updated 23 ಆಗಸ್ಟ್ 2019, 13:32 IST
   

ಬೆಂಗಳೂರು: ‘ಮೀ–ಟೂ ಆರೋಪದ ಹಿನ್ನೆಲೆಯಲ್ಲಿ ನಟ ಅರ್ಜುನ ಸರ್ಜಾ ನನ್ನ ವಿರುದ್ಧ ದಾಖಲಿಸಿರುವ ಮಾನನಷ್ಟ ಮೊಕದ್ದಮೆ ವಜಾಗೊಳಿಸಬೇಕು’ ಎಂದು ಕೋರಿ ನಟಿ ಶ್ರುತಿ ಹರಿಹರನ್‌ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನಗರದ ಸೆಷನ್ಸ್‌ ಕೋರ್ಟ್ ವಜಾ ಮಾಡಿದೆ.

‘ಅರ್ಜುನ್‌ ಸರ್ಜಾ ಪರವಾಗಿ ಅವರ ಅಕ್ಕನ ಮಗ ಧ್ರುವ ಸರ್ಜಾ ಮೊಕದ್ದಮೆ ದಾಖಲಿಸಿದ್ದಾರೆ. ಇದು ಸೂಕ್ತ ಅಧಿಕಾರ ಪತ್ರವಿಲ್ಲದೇ (ಜನರಲ್‌ ಪವರ್ ಆಫ್‌ ಅಟಾರ್ನಿ–ಜಿಪಿಒ) ಸಲ್ಲಿಸಿರುವ ಮೊಕದ್ದಮೆಯಾಗಿದೆ. ಆದ್ದರಿಂದ ಮೊಕದ್ದಮೆ ವಜಾಗೊಳಿಸಬೇಕು’ ಎಂದು ಶೃತಿ ಕೋರಿದ್ದರು.

ವಿಚಾರಣೆ ನಡೆಸಿದ ಸಿಟಿ ಸಿವಿಲ್‌ ಕೋರ್ಟ್‌ ಸೆಷನ್ಸ್‌ ನ್ಯಾಯಾಧೀಶೆ ಸುವರ್ಣಾ ಮಿರ್ಜಿ ಅವರು, ‌‘ಈ ಲೋಪ ಸರಿಪಡಿಸಿಕೊಳ್ಳಬಹುದಾಗಿದೆ. ಇದರಿಂದಾಗಿ ಇಡೀ ಮೊಕದ್ದಮೆ ಅನರ್ಹಗೊಳ್ಳದು. ಆದಾಗ್ಯೂ ಮಧ್ಯಂತರ ಅರ್ಜಿ ವಜಾ ಮಾಡಲಾಗಿದೆ’ ಎಂದು ಆದೇಶಿಸಿದರು.

ADVERTISEMENT

ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಶ್ರುತಿ ಹರಿಹರನ್‌ ಅವರು, ಅರ್ಜುನ್‌ ಸರ್ಜಾ ವಿರುದ್ಧ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.