ADVERTISEMENT

ಕೌಶಲ ಆಧಾರಿತ ಉದ್ಯೋಗ ತರಬೇತಿ ಕೇಂದ್ರ ಸ್ಥಾಪನೆಗೆ ಸಚಿವ ಕೆ.ಎಚ್‌.ಮುನಿಯಪ್ಪ ಮನವಿ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 15:06 IST
Last Updated 26 ನವೆಂಬರ್ 2024, 15:06 IST
<div class="paragraphs"><p>ಕೆ.ಎಚ್‌.ಮುನಿಯಪ್ಪ&nbsp;</p></div>

ಕೆ.ಎಚ್‌.ಮುನಿಯಪ್ಪ 

   

ನವದೆಹಲಿ: ಕೋಲಾರ ಜಿಲ್ಲೆಯ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಕೌಶಲ ಆಧಾರಿತ ಉದ್ಯೋಗ ತರಬೇತಿ ಕೇಂದ್ರ ಸ್ಥಾಪಿಸಲು ಅನುದಾನ ಮಂಜೂರು ಮಾಡಬೇಕು ಎಂದು ಕೇಂದ್ರದ ಕಾರ್ಮಿಕ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಮನವಿ ಮಾಡಿದರು. 

ಈ ಯೋಜನೆಯು ಯುವಕರಿಗೆ ಬೇಡಿಕೆ ಆಧಾರಿತ ಕೌಶಲ ತರಬೇತಿ ಒದಗಿಸುವ ಗುರಿ ಹೊಂದಿದೆ. ತಾಂತ್ರಿಕ ತರಬೇತಿ ಕೇಂದ್ರ (ಟಿಟಿಸಿ) ಮಂಜೂರಾಗಿದೆ. ಆದರೆ, ಹಣ ಬಿಡುಗಡೆಯಾಗದ ಕಾರಣ ಯೋಜನೆ ಇನ್ನೂ ಆರಂಭವಾಗಿಲ್ಲ. ಕೇಂದ್ರ ಸ್ಥಾಪನೆಗೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲೇ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ ಎಂದು ಸಚಿವರ ಗಮನಕ್ಕೆ ತಂದರು. ಈ ಕೇಂದ್ರವು ವಾರ್ಷಿಕವಾಗಿ 1,000 ವ್ಯಕ್ತಿಗಳಿಗೆ ತರಬೇತಿ ನೀಡುತ್ತದೆ ಎಂದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.