ಉತ್ತರ ಕರ್ನಾಟಕ ಭಾಗದಲ್ಲಿ ಶಿಕ್ಷಣ ಕ್ರಾಂತಿಗೆ ಶತಮಾನದ ಸಂಭ್ರಮ ಆಗಿಯೇ ಮತ್ತಾರು ವರ್ಷಗಳು ಕಳೆದವು. ಕರ್ನಾಟಕ ಲಿಂಗಾಯತ ಎಜುಕೇಷನ್ ಸೊಸೈಟಿ ಈಗ ಬೃಹತ್ ಆಲದ ಮರದಂತೆ ಬೆಳೆದಿದೆ. ತನ್ನ ಬೇರುಗಳೂ ಕಥೆ ಹೇಳುವಂತಾಗಲಿ ಎಂದು ಶತಮಾನದ ಸಂಭ್ರಮಕ್ಕೆ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಿದೆ. ಏಳೆಂಟು ದಶಕಗಳ ಹಿಂದಿನ ಗಡಿಯಾರಗಳು, ಸಮಯ ಮತ್ತು ದಿನಾಂಕ ಒಟ್ಟೊಟ್ಟಿಗೆ ಹೇಳುವಂಥವು, ಹಬೆಯಿಂದ ಕಾರ್ಯನಿರ್ವಹಿಸುವ ಫ್ಯಾನು, ದೊಡ್ಡ ಬುರುಡೆ ಬಲ್ಬು ಹೀಗೆ.. ಇನ್ನೂ ಏನೆಲ್ಲ ಅಪರೂಪದ ವಸ್ತುಗಳು ಈ ಸಂಗ್ರಹಾಲಯದಲ್ಲಿವೆ. ಶತಮಾನದ ಕತೆಯನ್ನು ತನ್ನಂಗಳದಲ್ಲಿರಿಸಿಕೊಂಡಿರುವ ವಸ್ತು ಸಂಗ್ರಹಾಲಯ ಮಿಸಳ್ ಹಾಪ್ಚಾದ ನೂರರ ಸಂಭ್ರಮದಲ್ಲಿ..
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.