ADVERTISEMENT

ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ನ್ಯಾಯಾಂಗ ಬಂಧನ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2019, 7:53 IST
Last Updated 6 ಮಾರ್ಚ್ 2019, 7:53 IST
   

ರಾಮನಗರ: ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಇಲ್ಲಿನ ಸಿಜೆಎಂ ನ್ಯಾಯಾಲಯವು ಇದೇ 19ರವರೆಗೆ ವಿಸ್ತರಿಸಿತು‌.

ಅವರ ನ್ಯಾಯಾಂಗ ಬಂಧನದ ಅವಧಿಯು ಬುಧವಾರ ಮುಗಿದಿದ್ದು, ಅನಾರೋಗ್ಯದ ಕಾರಣ ಆರೋಪಿ ಶಾಸಕ ವಿಚಾರಣೆಗೆ ಹಾಜರಾಗಲಿಲ್ಲ. ಈ ಹಿನ್ನೆಲೆಯಲ್ಲಿ ಅವರ ನ್ಯಾಯಾಂಗ ಬಂಧನವನ್ನು‌ ಮತ್ತೆ 14 ದಿನ‌ ವಿಸ್ತರಿಸಿ ನ್ಯಾಯಾಧೀಶೆ ಅನಿತಾ ಆದೇಶ ನೀಡಿದರು.‌

ಶಾಸಕ ಆನಂದ ಸಿಂಗ್ ಮೇಲೆ ಗಂಭೀರ ಹಲ್ಲೆ ನಡೆಸಿದ ಆರೋಪದ ಮೇಲೆ ಗಣೇಶರನ್ನು ಬಿಡದಿ ಪೊಲೀಸರು ಫೆ.20ರಂದು ಬಂಧಿಸಿದ್ದರು.‌ 21ರಂದು ಅವರನ್ನು‌ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯವು ಇದೇ 6ರವರೆಗೆ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸುವಂತೆ ಸೂಚಿಸಿತ್ತು.‌

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.