ADVERTISEMENT

ವರ್ಗಾವಣೆಯಲ್ಲಿ ಬಿ.ವೈ.ರಾಘವೇಂದ್ರ ಹಸ್ತಕ್ಷೇಪ: ಬಿಜೆಪಿ ಶಾಸಕ ಗೂಳಿಹಟ್ಟಿ ಆರೋಪ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2019, 13:08 IST
Last Updated 26 ಆಗಸ್ಟ್ 2019, 13:08 IST
ಗೂಳಿಹಟ್ಟಿ ಡಿ.ಶೇಖರ್‌
ಗೂಳಿಹಟ್ಟಿ ಡಿ.ಶೇಖರ್‌   

ಚಿತ್ರದುರ್ಗ: ಹೊಸದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಿಎಸ್‌ಐ ವರ್ಗಾವಣೆಯಲ್ಲಿ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಆರೋಪಿಸಿದ್ದಾರೆ.

‘ಹೊಸದುರ್ಗ ಠಾಣೆಯ ಪಿಎಸ್‌ಐ ಹುದ್ದೆ ಖಾಲಿ ಇತ್ತು. ಐಜಿಪಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದೆ. ಮುಖ್ಯಮಂತ್ರಿ ಕಚೇರಿಯ ಸೂಚನೆ ಮೇರೆಗೆ ಸ್ಥಳ ಕಾಯ್ದಿರಿಸಿದ್ದಾಗಿ ಹೇಳಿದರು. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಧಿಕಾರಿಗಳ ವರ್ಗಾವಣೆ ಕೂಡ ಶಿವಮೊಗ್ಗ ಸಂಸದರ ಮಾತಿನಂತೆ ನಡೆಯುತ್ತದೆ ಎಂಬ ಬೇಸರವನ್ನು ಬೆಂಬಲಿಗರ ಸಭೆಯಲ್ಲಿ ತೋಡಿಕೊಂಡೆ’ ಎಂದು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

‘ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಹಲವು ಬಿಜೆಪಿ ಶಾಸಕರಿಗೆ ಉತ್ತಮ ಅನುದಾನ ಸಿಕ್ಕಿದೆ. ಹೊಸದುರ್ಗಕ್ಕೆ ಮಾತ್ರ ಒಂದು ರೂಪಾಯಿ ಕೂಡ ಸಿಗಲಿಲ್ಲ. ಆದರೂ, ಪಕ್ಷ ಬಿಟ್ಟು ಹೋಗುತ್ತೇನೆ ಎಂಬ ಅಪಪ್ರಚಾರ ಮಾಡಲಾಯಿತು. ಈಗ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬಂದಿದ್ದರೂ ಅನುದಾನ ನೀಡಿಲ್ಲ’ ಎಂದು ಅಸಮಾಧಾನ ಹೊರಹಾಕಿದರು.

ADVERTISEMENT

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.