ADVERTISEMENT

ಹಲ್ಲೆಗೊಳಗಾಗಿರುವ ಶಾಸಕ ತನ್ವೀರ್ ಸೇಠ್ ಕಿವಿ ಭಾಗದ ಮರುಜೋಡಣೆ ವಿಫಲ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2019, 7:40 IST
Last Updated 21 ನವೆಂಬರ್ 2019, 7:40 IST
ಶಾಸಕ ತನ್ವೀರ್ ಸೇಠ್
ಶಾಸಕ ತನ್ವೀರ್ ಸೇಠ್   

ಮೈಸೂರು: ಹಲ್ಲೆಗೆ ಒಳಗಾಗಿ ಇಲ್ಲಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಾಗಿರುವ ಶಾಸಕ ತನ್ವೀರ್ ಸೇಠ್ ಅವರ ತುಂಡರಿಸಿದ್ದ ಕಿವಿಯ ಭಾಗದ ಮರುಜೋಡಣೆ ವಿಫಲವಾಗಿದೆ.

'ಮರುಜೋಡಣೆ ಭಾಗವು ಕಪ್ಪು ಬಣ್ಣಕ್ಕೆ ತಿರುಗಿತ್ತು. ಹೀಗಾಗಿ ಗುರುವಾರ ಬೆಳಿಗ್ಗೆ ಶಸ್ತ್ರಚಿಕಿತ್ಸೆ ನಡೆಸಿ ಮರುಜೋಡಿಸಿದ್ದ ಭಾಗವನ್ನು ತೆಗೆದು ಹಾಕಲಾಗಿದೆ. ತೆಗೆದು ಹಾಕಿದ ಭಾಗವನ್ನು ತನ್ವೀರ್ ಸೇಠ್ ಅವರ ಕುಟುಂಬಕ್ಕೆ ನೀಡಲಾಗಿದೆ' ಎಂದು ಅಸ್ಪತ್ರೆಯ ವೈದ್ಯಕೀಯ ಸೇವೆಗಳ ಮುಖ್ಯಸ್ಥ ಡಾ.ಉಪೇಂದ್ರ ಶೆಣೈ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು‌.

ಕಿವಿಯ ಭಾಗವನ್ನು ತೆಗೆದಿರುವುದರಿಂದ ಪ್ಲಾಸ್ಟಿಕ್ ಸರ್ಜರಿ ಮಾಡಿ ಸರಿ ಮಾಡಬಹುದು ಎಂದು ಹೇಳಿದರು.
ಕುತ್ತಿಗೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿರುವುದರಿಂದ ಮಾತನಾಡುವಾಗ , ನಗುವಾಗ ತುಟಿ ಸ್ವಲ್ಪ ಓರೆಯಾಗುತ್ತಿದೆ. ಜತೆಗೆ, ಧ್ವನಿ ಬದಲಾವಣೆಯಾಗಿದೆ. ಮುಂದಿನ ಮೂರು ವಾರಗಳ ನಂತರ ಈ ನ್ಯೂನತೆಗಳು ಸರಿಹೋಗುವ ಸಾಧ್ಯತೆ ಇದೆ ಎಂದರು.

ADVERTISEMENT

ಇಂದು ಸಂಜೆ ವೇಳೆಗೆ ಅವರನ್ನು ವಾರ್ಡ್ ಗೆ ಸ್ಥಳಾಂತರ ಮಾಡಲಾಗುವುದು. ಇನ್ನೂ ಒಂದು ವಾರ ಆಸ್ಪತ್ರೆಯಲ್ಲೇ ಇರಬೇಕಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.