ಮಹದೇಶ್ವರ ಬೆಟ್ಟ: ಇಲ್ಲಿನ ಐತಿಹಾಸಿಕ ಮಲೆಮಹದೇಶ್ವರ ಸ್ವಾಮಿ ದೇವಸ್ಥಾನದ ಹುಂಡಿಗೆ ಭಕ್ತರು ಹಾಕಿದ್ದ ಕಾಣಿಕೆಯ ಎಣಿಕೆ ಕಾರ್ಯ ಗುರುವಾರ ನಡೆಯಿತು. ₹1.08 ಕೋಟಿಯಷ್ಟು (₹1,08,14,553) ಹಣ ಕಾಣಿಕೆ ರೂಪದಲ್ಲಿ ಬಂದಿದೆ.
ಹಣದ ಜೊತೆಗೆ, 102 ಗ್ರಾಂ ಬಂಗಾರ ಮತ್ತು 1.596 ಕೆಜಿ ಬೆಳ್ಳಿಯನ್ನೂ ಭಕ್ತರು ಸ್ವಾಮಿಗೆ ಕಾಣಿಕೆಯಾಗಿ ಅರ್ಪಿಸಿದ್ದಾರೆ.
ಶ್ರೀಮಲೆಮಹದೇಶ್ವರಸ್ವಾಮಿಕ್ಷೇತ್ರಅಭಿವೃದ್ಧಿ ಪ್ರಾಧಿಕಾರದಕಾರ್ಯದರ್ಶಿ ಎಂ.ಜೆ. ರೂಪಾ ಅವರ ಅಧ್ಯಕ್ಷತೆಯಲ್ಲಿ ಹಾಗೂ ಸಾಲೂರು ಬೃಹನ್ಮಠದ ಪಟ್ಟದ ಗುರುಸ್ವಾಮಿಗಳವರಉಪಸ್ಥಿತಿಯಲ್ಲಿಹುಂಡಿಗಳನ್ನುತೆರೆಯಲಾಯಿತು. ಬಿಗಿ ಪೊಲೀಸ್ ಭದ್ರತೆಯಲ್ಲಿ ಎಣಿಕೆ ನಡೆಯಿತು.
ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರಾದ ಕೊಪ್ಪಾಳಿ ಮಹದೇವನಾಯ್ಕ, ಡಿ.ದೇವರಾಜು, ಬಿ.ಮಹದೇವಪ್ಪ, ಜವರೇಗೌಡ ಹಾಗೂ ಪ್ರಾಧಿಕಾರದ ಉಪಕಾರ್ಯದರ್ಶಿ ರಾಜಶೇಖರ ಮೂರ್ತಿ, ಅಧೀಕ್ಷಕರಾದ ಎಂ. ಬಸವರಾಜು, ಬಿ. ಮದರಾಜು, ಲೆಕ್ಕಾಧಿಕಾರಿ ಮಹದೇವಸ್ವಾಮಿ, ಹಾಗೂ ದೇವಸ್ಥಾನದ ಎಲ್ಲಾನೌಕರರು, ಎಸ್‌ಬಿಎಂ ವ್ಯವಸ್ಥಾಪಕರಾದಸೆಂದಿಲ್ನಾಥನ್ ಮತ್ತು ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.