ಮಂಗಳೂರು: ಪ್ರಧಾನಿ ಮೋದಿ ಅವರನ್ನು ಕಾಣಲು, ಅವರ ಭಾಷಣ ಕೇಳಲು ಮರವೇರಿಕುಳಿತಿದ್ದ ಜನರತ್ತ ಕೈಬೀಸಿದ ಮೋದಿ, ಕೂಡಲೇ ಅಲ್ಲಿಂದ ಕೆಳಗಿಳಿಯುವಂತೆ ವೇದಿಕೆಯಿಂದಲೇ ಮನವಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಜನರು ಬಂದಿದ್ದರಿಂದನೆಹರೂ ಮೈದಾನ ಪ್ರವೇಶಿಸಲು ಹರಸಾಹಸ ಪಟ್ಟರು. ಸ್ಥಳಾವಕಾಶ ಸಿಗದೆ ಅನೇಕರುಮೈದಾನದ ಪಕ್ಕದ ಮರವನ್ನು ಏರಿದ್ದರು. ಮರದ ಮೇಲಿಂದಲೇ ಕೈಬೀಸುತ್ತಿದ್ದವರನ್ನು ಗಮನಿಸಿದ ಪ್ರಧಾನಿ ಮೋದಿ, ’ಅಪಾಯವನ್ನು ತಂದುಕೊಳ್ಳುವಂತಹ ಈ ರೀತಿಯಪ್ರಯತ್ನ ಬೇಡ. ಕೂಡಲೇ ಮರದಿಂದ ಕೆಳಗೆ ಇಳಿಯಿರಿ’ ಎಂದು ವಿನಂತಿಸಿದರು.
‘ಈ ರೀತಿ ತೊಂದರೆ ತೆಗೆದುಕೊಳ್ಳಬೇಡಿ. ನಾನು ನಿಮ್ಮವ, ಮತ್ತೆ ಇಲ್ಲಿಗೆ ಬರುವೆ, ಮತ್ತೆ ಭೇಟಿ ಮಾಡೋಣ...ಕೆಳಗೆ ಇಳಿಯಿರಿ...’ ಎನ್ನುತ್ತಿದ್ದಂತೆ ಜನರ ಉದ್ಗಾರ ಜೋರಾಯಿತು.
ಕ್ರೀಡಾಂಗಣದಲ್ಲಿ ಪ್ರವೇಶಕ್ಕೆ ಅಳವಡಿಸಲಾಗಿರುವ ಗೇಟ್‌ಗಳ ಸಂಖ್ಯೆ ಕಡಿಮೆಯಾಗಿದ್ದು, ಜನರ ಸಂಖ್ಯೆ ಹೆಚ್ಚಾಗಿತ್ತಿ. ಹೀಗಾಗಿ ನೂಕುನುಗ್ಗಲು ಉಂಟಾಗಿತ್ತು. ಜನರನ್ನು ನಿಯಂತ್ರಿಸಲು ಪೊಲೀಸರುಸಾಕಷ್ಟು ಪ್ರಯಾಸ ಪಡುವಂತಾಯಿತು.
ನೂಕುನುಗ್ಗಲು ಉಂಟಾಗಿದ್ದರಿಂದ ಬಹಳಷ್ಟು ಜನರು ಮನೆಗೆ ಹಿಂದಿರುಗಿದರು.
ಹೆಚ್ಚು ವಿವಿಐಪಿ ಪಾಸ್‌ಗಳನ್ನು ವಿತರಿಸಲಾಗಿತ್ತು, ಆದರೆ ಗೇಟ್‌ಗಳ ನಿರ್ವಹಣೆಸರಿಯಾಗಿ ಆಗದೇ ಇರುವುದರಿಂದ ಜನರುಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.