ADVERTISEMENT

ಮೋಜಣಿ ತಂತ್ರಾಂಶಕ್ಕೂ ಸರ್ವರ್ ಕಾಟ

ಜಮೀನಿನ ಹದ್ದುಬಸ್ತು,ಇ–ಸ್ವತ್ತು ಸೇವೆಗೆ ಅರ್ಜಿ ಸಲ್ಲಿಸಲು ಪರದಾಡುವ ರೈತರು

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2022, 19:24 IST
Last Updated 15 ಫೆಬ್ರುವರಿ 2022, 19:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕಂದಾಯ ಇಲಾಖೆಯ ಮೋಜಣಿ ತಂತ್ರಾಂಶದಲ್ಲಿನ ಲೋಪ, ಸರ್ವರ್ ಸಮಸ್ಯೆಯಿಂದ ಜಮೀನಿನ ಹದ್ದುಬಸ್ತಿಗೆ ಅರ್ಜಿ ಸಲ್ಲಿಸಲು ರೈತರು ಮೂರ್ನಾಲ್ಕು ದಿನ ಕಾಯಬೇಕಾದ ಸ್ಥಿತಿ ಇದೆ.

ಕಂದಾಯ ಇಲಾಖೆಯಲ್ಲಿ ಸೇವೆ ಪಡೆಯಲು ಆಗುವ ವಿಳಂಬ ತಪ್ಪಿಸಲು ಹಲವು ತಂತ್ರಾಂಶಗಳನ್ನು ಅಳವಡಿಸಿಕೊಂಡಿದೆ. ಅದೇ ರೀತಿ ಜಮೀನಿನ ಹದ್ದುಬಸ್ತು, ಇ–ಪೋಡಿ, ಇ–ಸ್ವತ್ತು ಸೇವೆ ಪಡೆಯಲು ಮೋಜಣಿ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಬೇಕು. ಈ ತಂತ್ರಾಂಶ ಪದೇ ಪದೇ ಕೈಕೊಡುವುದರಿಂದ ರೈತರು ತಾಲ್ಲೂಕು ಕಚೇರಿ, ನಾಡ ಕಚೇರಿಗಳಿಗೆ ಎಡತಾಕುವಂತಾಗಿದೆ.

‘ನೆಲಮಂಗಲ ತಾಲ್ಲೂಕು ಕಚೇರಿಯಲ್ಲಿ ಫೆಬ್ರುವರಿ 9ರಿಂದ ಹದ್ದುಬಸ್ತಿಗೆ ಅರ್ಜಿ ಸಲ್ಲಿಸಲು ಪ್ರಯತ್ನಿಸಲಾಗಿದೆ. ಪ್ರತಿದಿನವೂ ಮೋಜಣಿ ತಂತ್ರಾಂಶದಲ್ಲಿ ಸರ್ವರ್ ಲಾಗಿನ್ ಎರರ್ ಎಂಬ ಸಂದೇಶ ತೋರಿಸುತ್ತಿದೆ. ಈ ಬಗ್ಗೆ ಪ್ರಶ್ನಿಸಿದರೆ ಮೇಲಧಿಕಾರಿಗಳಿಗೆ ತಿಳಿಸಿ ಎಂಬ ಉತ್ತರವನ್ನು ಸಿಬ್ಬಂದಿ ನೀಡುತ್ತಿದ್ದಾರೆ. ಸಮಸ್ಯೆಯನ್ನು ಯಾರ ಬಳಿ ಹೇಳಿಕೊಳ್ಳಬೇಕು’ ಎಂದು ಹದ್ದುಬಸ್ತಿಗೆ ಅರ್ಜಿ ಸಲ್ಲಿಸಲು ಪರ
ದಾಡಿರುವ ಬಿ. ಹನುಮಂತರಾಯಪ್ಪ ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಕಳೆದ ಬುಧವಾರದಿಂದ ಅರ್ಜಿ ಸಲ್ಲಿಸಲು ಪ್ರಯತ್ನಿಸಿದ್ದೇನೆ. ಈ ಮಂಗಳವಾರ ಸಮಸ್ಯೆ ಸರಿಯಾಗಿದ್ದು, ಅರ್ಜಿ ಸಲ್ಲಿಕೆಯಾಗಿದೆ. ಒಬ್ಬ ರೈತ ಅರ್ಜಿ ಸಲ್ಲಿಸಲು ವಾರಗಟ್ಟಲೆ ಕಾಯಬೇಕಾದ ಸ್ಥಿತಿ ಇದೆ’ ಎಂದರು.

‘ಕಾವೇರಿ, ಭೂಮಿ, ಇ–ಆಸ್ತಿ, ಮೋಜಣಿ ಸೇರಿ ಯಾವುದೇ ತಂತ್ರಾಂಶದಲ್ಲಿ ಲೋಪ ಕಾಣಿಸಿ
ಕೊಂಡರೂ ಅದರ ಪರಿಣಾಮ ಆಸ್ತಿ ನೋಂದಣಿ ಮೇಲೆ ಬೀರುತ್ತದೆ. ವ್ಯಕ್ತಿ
ಯೊಬ್ಬರು ತನ್ನ ಆಸ್ತಿಯಲ್ಲಿ ಭಾಗಶಃ ಮಾರಾಟ ಮಾಡಬೇಕಿದ್ದರೆ, ಅದಕ್ಕೆ ಬೇಕಿರುವ ನಕ್ಷೆಯನ್ನು ‘ಮೋಜಣಿ’ ತಂತ್ರಾಂಶದಿಂದ ಪಡೆಯಬೇಕಾಗುತ್ತದೆ.

ನೋಂದಣಿ ಪ್ರಕ್ರಿಯೆ ನಡೆಸುವಾಗ ಯಾವುದೋ ಒಂದು ತಂತ್ರಾಂಶದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡರೆ ಇಡೀ ನೋಂದಣಿ ಪ್ರಕ್ರಿಯೆ ಅಲ್ಲೇ ನಿಲ್ಲುತ್ತದೆ. ಆದ್ದರಿಂದಲೇ ಸರ್ವರ್ ಡೌನ್ ಎಂಬ ಫಲಕಗಳು ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತವೆ’ ಎನ್ನುತ್ತಾರೆ ದಸ್ತಾವೇಜು ಬರಹಗಾರರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.