ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಮಂಗಳವಾರ ರಾತ್ರಿ ಚಂದ್ರಗ್ರಹಣ ಅವಧಿಯಲ್ಲಿ ಭಕ್ತರು ದರ್ಶನ ಪಡೆಯುವುದಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಮಠದ ಅಧಿಕಾರಿಗಳು ತಿಳಿಸಿದ್ದಾರೆ.
‘ತಡರಾತ್ರಿ 1.32 ರಿಂದ ನಸುಕಿನ 4.30 ರವರೆಗೂ ಚಂದ್ರಗ್ರಹಣ ಇದೆ. ಈ ಅವಧಿಯಲ್ಲಿ ಮಠದಲ್ಲಿ ವಿಶೇಷ ಹೋಮ, ಹವನ ನಡೆಸಲಾಗುವುದು. ಭಕ್ತರು ಕೂಡಾ ರಾಯರ ಸನ್ನಿಧಿಗೆ ಬಂದು ದರ್ಶನ ಪಡೆದುಕೊಳ್ಳಬಹುದಾಗಿದೆ’ ಎಂದು ತಿಳಿಸಲಾಗಿದೆ.
ಪ್ರತಿದಿನ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆ ಹಾಗೂ ಸಂಜೆ 4 ರಿಂದ ರಾತ್ರಿ 9.30 ರವರೆಗೂ ಮಠದಲ್ಲಿ ಭಕ್ತರು ದರ್ಶನ ಪಡೆಯುವ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಿಳಿಸಲಾಗಿದೆ.
ಸೂಗೂರೇಶ್ವರ ದೇವಸ್ಥಾನ: ರಾಯಚೂರು ತಾಲ್ಲೂಕು ಸುಕ್ಷೇತ್ರ ದೇವಸೂಗೂರಿನ ಸೂಗೂರೇಶ್ವರ ದೇವಸ್ಥಾನದಲ್ಲಿ ಎಂದಿನಂತೆ ಭಕ್ತರು ಮಂಗಳವಾರವೂ ದರ್ಶನಕ್ಕೆ ಬರಬಹುದಾಗಿದೆ. ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೂ ದರ್ಶನದ ಅವಧಿ ಇದ್ದು, ಚಂದ್ರಗ್ರಹಣ ನಡೆಯುವ ರಾತ್ರಿ ಅವಧಿಯಲ್ಲಿ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತದೆ ಎಂದು ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.