ಬೆಂಗಳೂರು: ರಾಜ್ಯ ಅಂಗಾಂಗ ಕಸಿ ಯೋಜನೆಯಡಿ ಈವರೆಗೆ ಕಸಿ ಮಾಡಿಸಿ ಕೊಂಡವರ ಸಂಖ್ಯೆ ನೂರಕ್ಕೆ ತಲುಪಿದೆ.
ರಾಜ್ಯ ಸರ್ಕಾರವು ಬಿಪಿಎಲ್ ಕುಟುಂಬಗಳ ರೋಗಿಗಳಿಗಾಗಿ ಈ ಯೋಜನೆಯನ್ನು 2018ರಲ್ಲಿ ಆರಂಭಿ ಸಿತ್ತು. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಈ ಯೋಜನೆಯನ್ನು ನಿರ್ವಹಣೆ ಮಾಡುತ್ತಿದೆ. ಯೋಜನೆಯಡಿ ಯಕೃತ್ತು, ಮೂತ್ರಪಿಂಡ ಹಾಗೂ ಹೃದಯ ಸಮಸ್ಯೆ ಇರುವವರಿಗೆ ಕಸಿ ನಡೆಸಲಾಗುತ್ತದೆ. ಚಿಕಿತ್ಸಾ ವೆಚ್ಚವನ್ನು ಟ್ರಸ್ಟ್ ಭರಿಸುತ್ತಿದೆ.
ಮೂತ್ರಪಿಂಡ ಸಮಸ್ಯೆ ಎದುರಿಸುತ್ತಿದ್ದ 77 ರೋಗಿಗಳು, ಹೃದಯ ಸಮಸ್ಯೆ ಎದುರಿಸುತ್ತಿದ್ದ 15 ರೋಗಿಗಳು ಹಾಗೂ ಯಕೃತ್ತು ಸಮಸ್ಯೆ ಎದುರಿಸುತ್ತಿದ್ದ 8 ರೋಗಿಗಳು ಈ ಯೋಜನೆಯಡಿ ಕಸಿ ಮಾಡಿಸಿಕೊಂಡಿದ್ದಾರೆ. ಕಸಿ ಚಿಕಿತ್ಸೆಗೆ ಒಳಗಾದವರಿಗೆ ಇಮ್ಯುನೊಸಪ್ರೆಶನ್ ಔಷಧಗಳಿಗಾಗಿಪ್ರತಿವರ್ಷ ₹ 1 ಲಕ್ಷ ನೀಡಲಾಗುತ್ತದೆ.
‘ಬಡವರಿಗೆ ಗಗನ ಕುಸುಮವಾಗಿದ್ದ ಅಂಗಾಂಗ ಕಸಿ ಚಿಕಿತ್ಸೆ ಈಗ ಸುಲಭ ವಾಗಿ ದೊರೆಯುತ್ತಿದೆ. ಇದಕ್ಕೆ ಕಾರಣೀ ಭೂತರಾದ ಅಂಗಾಂಗ ದಾನಿಗಳು ಹಾಗೂ ‘ಜೀವಸಾರ್ಥಕತೆ’ ತಂಡಕ್ಕೆ ಧನ್ಯವಾದಗಳು’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.