ಬೆಂಗಳೂರು: ರಾಜ್ಯದಲ್ಲಿ ನೋಂದಾಯಿಸಿರುವ(ಹೊಸ ವಾಹನ ಬಿಟ್ಟು) ಎಲ್ಲ ಪ್ರಯಾಣಿಕ ಮತ್ತು ಸರಕು ಸಾರಿಗೆ ವಾಹನಗಳ ಮೋಟಾರು ತೆರಿಗೆಯನ್ನು ಮಾರ್ಚ್ 24 ರಿಂದ ಮೇ 23 ರವರೆಗೆ ಒಟ್ಟು ಎರಡು ತಿಂಗಳ ಅವಧಿಗೆ ವಿನಾಯಿತಿ ನೀಡಲಾಗಿದೆ.
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಈ ವಿಷಯ ತಿಳಿಸಿದ್ದಾರೆ. ಖಾಸಗಿ ಬಸ್ಸುಗಳ ಮಾಲೀಕರು ಈ ಸಂಬಂಧ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದರು.
ಅಲ್ಲದೆ, ಲಾಕ್‌ಡೌನ್ ಅನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಕಾರ್ಮಿಕರನ್ನು ಅವರ ಸ್ವಂತ ಊರುಗಳಿಗೆ ಕಳುಹಿಸಲು, ಸರ್ಕಾರದಿಂದ ಅನುಮತಿ ಪಡೆದರೆ ಜೂನ್ 30 ರವರೆಗೆ ರಹದಾರಿಗಳಿಂದ ವಿನಾಯಿತಿ ಮತ್ತು ಮೋಟಾರು ವಾಹನ ತೆರಿಗೆ ವಿನಾಯಿತಿ ನೀಡಲಾಗುವುದು ಎಂದು ಸವದಿ ಹೇಳಿದ್ದಾರೆ.
ಸರಕು ಸಾಗಣೆ ವಾಹನಗಳಿಗೆ ಅನ್ವಯಿಸುವಂತೆ ಏಪ್ರಿಲ್ 15 ರೊಳಗೆ ಪಾವತಿಸಬೇಕಿದ್ದ ದ್ವಿಪಕ್ಷೀಯ ತೆರಿಗೆ ದಂಡ ರಹಿತವಾಗಿ ಪಾವತಿಸಲು ಅವಧಿಯನ್ನು ಜೂನ್ 1 ರವರೆಗೆ ವಿಸ್ತರಿಸಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.