ಬೆಂಗಳೂರು: ಸಿನಿಮಾ ನಿರ್ಮಾಪಕ ಹಾಗೂ ಲೇಖಕ ವಿವೇಕ್ ರಂಜನ್ ಅಗ್ನಿಹೋತ್ರಿ ಅವರು ಮಾನವೀಯತೆ ಎಂದರೆ ಏನು ಎಂಬುದನ್ನು ಪ್ರಸ್ತುತ ಸನ್ನಿವೇಶಗಳನ್ನು ಉಲ್ಲೇಖಿಸಿ ವಿವರಿಸಿರುವ ಟ್ವೀಟ್‌ನ ಸ್ಕ್ರೀನ್‌ಶಾಟ್‌ಅನ್ನು ಸಂಸದ ಪ್ರತಾಪ ಸಿಂಹ ಹಂಚಿಕೊಂಡಿದ್ದಾರೆ.
'ತಾಲಿಬಾನ್‌ಅನ್ನು ಯಾವೊಂದು ಮುಸ್ಲಿಂ ರಾಷ್ಟ್ರವೂ ವಿರೋಧಿಸುತ್ತಿಲ್ಲ ಎಂದರೆ ಮಾನವೀಯತೆ ಬಗ್ಗೆ ಅವರು ಯೋಚಿಸುವುದಿಲ್ಲ ಎಂದರ್ಥ.
ತಾಲಿಬಾನ್‌ಅನ್ನುಯಾವೊಬ್ಬ ಪ್ರಗತಿಪರನು ವಿರೋಧಿಸುತ್ತಿಲ್ಲ ಎಂದರೆ ಮಾನವೀಯತೆ ಬಗ್ಗೆ ಅವರು ಚಿಂತಿಸುವುದಿಲ್ಲ ಎಂದರ್ಥ.
ಯಾವೊಬ್ಬ ಸೆಲೆಬ್ರಿಟಿ/ಸ್ಟಾರ್ ತಾಲಿಬಾನ್‌ಅನ್ನು ವಿರೋಧಿಸುತ್ತಿಲ್ಲ ಎಂದರೆ ಮಾನವೀಯತೆ ಬಗ್ಗೆ ಅವರು ಗಮನ ಕೊಡುವುದಿಲ್ಲ ಎಂದರ್ಥ.
ಕೇವಲ ಬಲಪಂಥೀಯರಷ್ಟೇ ತಾಲಿಬಾನ್‌ಅನ್ನು ವಿರೋಧಿಸುತ್ತಿದ್ದಾರೆ ಎಂದರೆ ಅವರಷ್ಟೇ ಮಾನವೀಯತೆ ಬಗ್ಗೆ ಯೋಚಿಸುತ್ತಾರೆ' ಎಂದು ವಿವೇಕ್ ರಂಜನ್ ಅಗ್ನಿಹೋತ್ರಿ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.