ADVERTISEMENT

ಕೇಂದ್ರದ ವಿರುದ್ಧ ಮಾಧುಸ್ವಾಮಿ ಮಾತಿಗೆ ತೇಜಸ್ವಿ ಸೂರ್ಯ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2021, 20:06 IST
Last Updated 27 ಮಾರ್ಚ್ 2021, 20:06 IST
ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ   

ಮೈಸೂರು: ರಾಜ್ಯಗಳ ರಚನೆ ಸಂಬಂಧ ಸಚಿವ ಮಾಧುಸ್ವಾಮಿ ಮಂಡಿಸಿದ ವಾದಕ್ಕೆ ಸಂಸದ ತೇಜಸ್ವಿ ಸೂರ್ಯ ಆಕ್ಷೇಪ ವ್ಯಕ್ತಪಡಿಸಿದರು.

ಆಡಳಿತಾತ್ಮಕ ಉದ್ದೇಶಕ್ಕಾಗಿ ರಾಜ್ಯಗಳನ್ನು ಹೊಸದಾಗಿ ರೂಪಿಸಲಾಗುತ್ತಿದೆಯೇ ಹೊರತು ರಾಜಕೀಯ ಕಾರಣಕ್ಕಾಗಿ ಅಲ್ಲ. 16 ರಾಜ್ಯಗಳು ಇದ್ದದ್ದು, ಈಗ 29 ಆಗಿರುವುದರಲ್ಲಿ ತಪ್ಪೇನಿದೆ? ಪರಿಣಾಮಕಾರಿ ಆಡಳಿತಕ್ಕಾಗಿ ಹೆಚ್ಚು ರಾಜ್ಯಗಳನ್ನು ರೂಪಿಸಿದರೆ ಸಮಸ್ಯೆ ಏನು’ ಎಂದು ಪ್ರಶ್ನಿಸಿದರು.

‘ರಾಜ್ಯದ ವಿಚಾರಕ್ಕೆ ಬಂದಾಗ, ಬೆಂಗಳೂರು ಮತ್ತು ಹಳೇ ಮೈಸೂರು ಭಾಗಕ್ಕೆ ಹೆಚ್ಚು ಆದ್ಯತೆ ನೀಡುತ್ತಿರುವುದು ಕಾಣಿಸುತ್ತದೆ. ಕಲ್ಯಾಣ ಕರ್ನಾಟಕಕ್ಕೆ ಮತ್ತಷ್ಟು ಆದ್ಯತೆ ಕೊಡಬೇಕು ಎನಿಸುತ್ತದೆ. ಕೇಂದ್ರ ಸರ್ಕಾರದ ದೃಷ್ಟಿಕೋನದಲ್ಲಿ ನೋಡಿದಾಗ ಬಿಹಾರ, ಉತ್ತರ ಪ್ರದೇಶ ಹಿಂದುಳಿದಿವೆ ಎಂಬುದು ಗೋಚರವಾಗುತ್ತದೆ. ಇದು ಮಾಧುಸ್ವಾಮಿ ಮಾತಿನಲ್ಲಿ ಕಂಡ ವಿರೋಧಾಭಾಸ’ ಎಂದರು.

‘ಕನ್ನಡಿಗರು ಕೂಡ ವಿವಿಧ ರಾಜ್ಯಗಳಲ್ಲಿರುವ ಶಿಕ್ಷಣ ಸಂಸ್ಥೆಗಳಿಗೆ ಹೋಗಿ ಉನ್ನತ ವ್ಯಾಸಂಗಕ್ಕೆ ಅರ್ಜಿ ಸಲ್ಲಿಸಬಹುದು’ ಎಂದು ತಿರುಗೇಟು ನೀಡಿದರು.

‘ದೇಶದ ಬಡತನಕ್ಕೆ ಮೂಲ ಕಾರಣ ಸಮಾಜವಾದ. ಖಾಸಗಿ ಉದ್ಯಮಕ್ಕೆ ಬೆಂಬಲ ನೀಡದೆ, ಸ್ವಂತ ಉದ್ದಿಮೆಗಳಿಗೆ ಅವಕಾಶ ನೀಡದೆ ಸಂಪನ್ಮೂಲ ಕೊರತೆ ಉಂಟಾಯಿತು’ ಎಂದರು.

ಧಾರ್ಮಿಕ ವಿಚಾರಗಳಿಂದಾಗಿ ದೇಶದ ಏಕತೆಗೆ ಭಂಗ ಉಂಟಾಗಿದೆ ಎಂಬ ವಾದವನ್ನು ಮುಂದಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.