ADVERTISEMENT

ಕುಮಾರಸ್ವಾಮಿ ಜನರ ಭಾವನೆ ತಿಳಿದು ನಡೆಯಬೇಕು: ಸಂಸದ ಜಾಧವ್

​ಪ್ರಜಾವಾಣಿ ವಾರ್ತೆ
Published 21 ಜುಲೈ 2019, 8:56 IST
Last Updated 21 ಜುಲೈ 2019, 8:56 IST
ಕುಮಾರಸ್ವಾಮಿ ಹಾಗೂ ಉಮೇಶ ಜಾಧವ
ಕುಮಾರಸ್ವಾಮಿ ಹಾಗೂ ಉಮೇಶ ಜಾಧವ    

ಕಲಬುರ್ಗಿ: ಸಮ್ಮಿಶ್ರ ಸರ್ಕಾರ ವಿಶ್ವಾಸ ಕಳೆದುಕೊಂಡಿದೆ.ಶಾಸಕರು ಸ್ವಯಂ ಪ್ರೇರಣೆಯಿಂದ ಹೊರಬಂದಿದ್ದಾರೆ. ಜನರ ಭಾವನೆ ತಿಳಿದುಕೊಂಡು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಡೆದುಕೊಳ್ಳಬೇಕು ಎಂದು ಸಂಸದ ಡಾ.ಉಮೇಶ ಜಾಧವ ಹೇಳಿದರು.

ನಗರದಲ್ಲಿ ಭಾನುವಾರ ‌ಸುದ್ದಿಗಾರರೊಂದಿಗೆ ‌ಮಾತನಾಡಿದ ಅವರು, ‘ಸಭಾಧ್ಯಕ್ಷರ (ಕೆ.ಆರ್‌.ರಮೇಶ್‌ ಕುಮಾರ್‌)ನಡೆ ತೃಪ್ತಿಕರವಾಗಿಲ್ಲ. ಆದರೂ ಅವರು ಸರಿಯಾದ ನಿರ್ಣಯ ತೆಗೆದುಕೊಳ್ಳುತ್ತಾರೆ ಎನ್ನುವ ನಂಬಿಕೆ ಇದೆ’ ಎಂದು ಹೇಳಿದರು.

‘ಹಣಕ್ಕಾಗಿ ಹೋದವರು ಯಾರೂ ಇಲ್ಲ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ನನ್ನ ಮೇಲೂ ಆರೋಪ ಮಾಡಿದ್ದರು. ಆದರೆ ಜನರು ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಒಂದು ಲಕ್ಷ ಮತದಿಂದ, ವಿಧಾನಸಭೆ ಚುನಾವಣೆಯಲ್ಲಿ ನನ್ನ ಮಗ ಅವಿನಾಶ್ ಜಾಧವನನ್ನು ಹತ್ತು ಸಾವಿರ ಮತಗಳಿಂದ ಗೆಲ್ಲಿಸಿದ್ದಾರೆ. ಯಾರ ಮನವನ್ನೂ ವಿನಾಕಾರಣ ನೋಯಿಸುವ ಕೆಲಸ ಮಾಡಬಾರದು’ ಎಂದು ತಿಳಿಸಿದರು.

ADVERTISEMENT

ಮುಂಬೈನಲ್ಲಿ ಅತೃಪ್ತ ಶಾಸಕರು ಸಿಕ್ಕಿದ್ದರು. ನಿಮಗೆ ನ್ಯಾಯ ಸಿಗುತ್ತದೆ,ಧೈರ್ಯದಿಂದ ಇರುವಂತೆ ಹೇಳಿದ್ದೇನೆ ಎಂದರು.

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.