ADVERTISEMENT

ಮುನಿರತ್ನ ದುಷ್ಕೃತ್ಯ ತಲೆತಗ್ಗಿಸುವಂಥದ್ದು: ಎಚ್.ಡಿ. ರಂಗನಾಥ್

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 16:23 IST
Last Updated 24 ಸೆಪ್ಟೆಂಬರ್ 2024, 16:23 IST
ಮುನಿರತ್ನ 
ಮುನಿರತ್ನ    

ಬೆಂಗಳೂರು: ‘ಶಾಸಕ ಮುನಿರತ್ನ ಅವರ ಜೊತೆಯಲ್ಲಿದ್ದ ಎಲ್ಲ ಬಿಜೆಪಿ ಶಾಸಕರು ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ಎಚ್‌ಐವಿ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದು ಕುಣಿಗಲ್ ಕಾಂಗ್ರೆಸ್ ಶಾಸಕ ಎಚ್.ಡಿ. ರಂಗನಾಥ್ ಸಲಹೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುನಿರತ್ನ ಆರು ವರ್ಷಗಳ ಹಿಂದೆ ಬಿಜೆಪಿ ಮುಖಂಡರ ಮೇಲೆ ಎಚ್‌ಐವಿ ಹರಡುವ ಕೃತ್ಯ ಎಸಗಿರುವ ಆರೋಪವಿದೆ. ಎಚ್‌ಐವಿ ಸೋಂಕಿತರನ್ನು ಬಳಸಿಕೊಂಡು ಮಾಡಿರುವ ಇಂತಹ ದುಷ್ಕೃತ್ಯ ತಲೆತಗ್ಗಿಸುವಂಥದ್ದು’ ಎಂದರು.

ಕೆಪಿಸಿಸಿ ವೈದ್ಯಕೀಯ ಘಟಕದ ಅಧ್ಯಕ್ಷ ಡಾ. ಮಧುಸೂದನ್ ಮಾತನಾಡಿ, ‘ಮುನಿರತ್ನ ಮಾಡಿರುವ ಕೃತ್ಯ ಬಾಂಬ್‌ ಹಾಕಿದಷ್ಟೇ ಘೋರ. ಇದು ಭಯೋತ್ಪಾದನೆಗೆ ಸಮ’ ಎಂದರು.

ADVERTISEMENT

ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು, ಮುಖಂಡರಾದ ಶ್ರೀನಿವಾಸ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.