ಮಡಿಕೇರಿ: ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ ಅವರು ಕೊಡಗಿನ ಅಳಿಯ. ಕೊಡವ ಸಮುದಾಯದ ಚೌರೀರ ಕುಟುಂಬದ ರೇಖಾ ಅವರೊಂದಿಗೆ ಮುತ್ತಪ್ಪ ರೈ ಅವರದ್ದು ಪ್ರೇಮ ವಿವಾಹ.
ಮುತ್ತಪ್ಪ ರೈ ಅವರು ಪುತ್ತೂರಿನಲ್ಲಿ ಬ್ಯಾಂಕ್‌ನಲ್ಲಿ ಕೆಲಸದಲ್ಲಿದ್ದಾಗ ಮಡಿಕೇರಿಗೆ ಕೆಲಸನಿಮಿತ್ತ ಭೇಟಿ ಕೊಡುತ್ತಿದ್ದರು. ಆಗ ಮುತ್ತಪ್ಪ ರೈ ಹಾಗೂ ರೇಖಾ ನಡುವೆ ಪ್ರೀತಿ ಮೂಡಿ ಪ್ರೇಮ ವಿವಾಹ ಮಾಡಿಕೊಂಡಿದ್ದರು. ಸಿಂಗಪುರದಲ್ಲಿ ನೆಲೆಸಿದ್ದಾಗ ಅವರ ಮೊದಲ ಪತ್ನಿ ರೇಖಾ ನಿಧನರಾಗಿದ್ದರು ಎಂದು ಮುತ್ತಪ್ಪ ರೈ ಆತ್ಮೀಯರು ಹೇಳಿದರು.
ರೇಖಾ ಅವರ ಮದುವೆಗೂ ಮೊದಲು ಮಡಿಕೇರಿಯ ಹೊಸ ಬಡಾವಣೆಯಲ್ಲಿ ನೆಲೆಸಿದ್ದ ಕುಟುಂಬಸ್ಥರು, ನಂತರ ಮೂರ್ನಾಡು ಸಮೀಪದ ಹೆದ್ದೂರಿಗೆ ಸ್ಥಳಾಂತರಗೊಂಡಿದ್ದಾರೆ.
ಜಿಲ್ಲೆಯೊಂದಿಗೆ ಮುತ್ತಪ್ಪ ರೈ ಒಡನಾಟ ಇರಿಸಿಕೊಂಡಿದ್ದರು. ಕುಶಾಲನಗರದ ಸುತ್ತಮುತ್ತ ಅವರಿಗೆ ಸೇರಿದ ಆಸ್ತಿಯಿದೆ. ಕ್ಯಾನ್ಸರ್‌ಗೆ ತುತ್ತಾಗುವ ಮೊದಲು ಜಿಲ್ಲೆಗೆ ಆಗಾಗ್ಗೆ ಭೇಟಿ ಕೊಡುತ್ತಿದ್ದರು. ಕೊಡಗಿನಲ್ಲಿ ಜಯ ಕರ್ನಾಟಕ ಸಂಘಟನೆ ಬೆಳೆಸುವ ಕನಸು ಕಂಡಿದ್ದರು. ವಿರಾಜಪೇಟೆ ಹಾಗೂ ನಾಪೋಕ್ಲು ಭಾಗದಲ್ಲಿ ಸಂಘಟನೆ ಸಕ್ರಿಯವಾಗಿದೆ.2018ರಲ್ಲಿ ಕೊಡಗಿನಲ್ಲಿ ಪ್ರಾಕೃತಿಕ ವಿಕೋಪದ ಸಂಭವಿಸಿದಾಗ ಸಾಕಷ್ಟು ನೆರವು ನೀಡಿದ್ದರು. ಜಿಲ್ಲೆಯಿಂದ ಯಾರೇ ಬಿಡದಿಯ ನಿವಾಸಕ್ಕೆ ಹೋದರೂ ಕೊಡಗಿನ ಖಾದ್ಯಗಳನ್ನೇ ಮಾಡಿಸಿ ಬಡಿಸುತ್ತಿದ್ದರು ಎಂದು ಆತ್ಮೀಯರೊಬ್ಬರು ‘ಪ್ರಜಾವಾಣಿ’ಗೆ ಎದುರು ನೆನಪು ಮಾಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.